ಬೈಲಹೊಂಗಲ : ವರ್ಷ ಪದ್ದತಿಯಂತೆ ಈ ವರ್ಷವೂ ತಾಲೂಕಿನ ಅನಿಗೋಳ ಗ್ರಾಮದ ಆರಾಧ್ಯ ದೈವ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಸಕಲ ಭಕ್ತರ ಜಯಘೋಷಗಳ ಮದ್ಯೆ ಅದ್ದೂರಿಯಾಗಿ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಶ್ರೀ ರಾಮಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಮಾಡಲಾಗಿತ್ತು ಭಕ್ತರು ಬೆಳಗ್ಗಿನಿಂದ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುಣಿತರಾದರು. ಸಂಜೆ ನಡೆದ ಮಹಾರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ನೆರೆದು ತಮ್ಮ ಭಕ್ತಿ ಭಾವ ಮೆರೆದು ರಾಮಲಿಂಗಪ್ಪನಿಗೆ ಜೈ ಎನ್ನುವ ಜಯಘೋಷದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು.
ಕಮೀಟಿ ಸದಸ್ಯರು ಜಾತ್ರಾ ಮಹೋತ್ಸವವನ್ನು ಅಚ್ಷುಕಟ್ಟಾಗಿ ಆಯೋಜಿಸಿದ್ದರು.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಅನಿಗೋಳದ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ನೆರವೇರಿದ್ದು, ಇವತ್ತು ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ....
ಸುನೀಲ ಮರಕುಂಬಿ .. ಮಾ ಭಾರತಿ ಸೇವಾ ಫೌಂಡೇಶನ್ ಅಧ್ಯಕ್ಷ
ವರದಿ : ರವಿಕಿರಣ್ ಯಾತಗೇರಿ