ರೆಫ್ರಿಜರೇಟರ್‌ನಲ್ಲಿ ಪತ್ತೆಯಾದ ಮತ್ತೊಬ್ಬ ಮೃತ ಬಾಲಿಕೆಯ ದೇಹ ಬೆಚ್ಚಿಬಿದ್ದ ದೆಹಲಿ

  • Krishna Shinde
  • 14 Jan 2024 , 11:31 PM
  • Delhi
  • 144

ದೆಹಲಿಯಲ್ಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.  ಯುವಕ ತನ್ನ ಗೆಳತಿಯನ್ನು ಕೊಂದು ಶವವನ್ನು ಫ್ರಿಡ್ಜ್‌ನಲ್ಲಿ ಇಟ್ಟ ಹೇಯ ಕೃತ್ಯ ನಡೆದಿದೆ.  

ದೆಹಲಿಯ ನಜಾಫ್‌ಗಢ್‌ನ ಮಿತ್ರಾನ್ ಗ್ರಾಮದಲ್ಲಿ ಧಾಬಾದ ಫ್ರಿಡ್ಜ್‌ನಿಂದ ಮಹಿಳೆಯ ಮೃತ ದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  

ಸಾಹಿಲ್ ಮತ್ತು ಮೃತ ಬಾಲಕಿ ನಿಕ್ಕಿ ಯಾದವ್ ಕಳೆದ ಎರಡು ವರ್ಷಗಳಿಂದ ಲಿವ್ ಇನ್‌ನಲ್ಲಿ ವಾಸಿಸುತ್ತಿದ್ದರು ಎಂದು  ಬಹಿರಂಗವಾಗಿದೆ.

ಆರೋಪಿ ಸಾಹಿಲ್ ಗೆಹ್ಲೋಟ್ (24) ಎಂಬಾತನನ್ನು ಬಂಧಿಸಿದ ಪೊಲೀಸರು, ಈತ ಇನ್ನೊಂದು ಹುಡುಗಿಯನ್ನು ಮದುವೆಯಾಗಲು ಮುಂದಾದಾಗ ಅವನನ್ನು ತಡೆಯಲು ನಿಕ್ಕಿ  ಪ್ರಯತ್ನಿಸಿದಾಗ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿರುವ ತನ್ನ "ಧಾಬಾ" ದಲ್ಲಿ ಆಕೆಯ ದೇಹವನ್ನು ಫ್ರೀಜರ್‌ನಲ್ಲಿ ತುಂಬಿಸಿ ಅದೇ ದಿನ ಇನ್ನೊಬ್ಬ ಹುಡುಗಿಯನ್ನು ಮದುವೆಯಾಗಲು ಹೊರತಿದ್ದ ಎಂದು ತಿಳಿದು ಬಂದಿದೆ.

ಸಾಹಿಲನನ್ನು ಗಲ್ಲಿಗೇರಿಸುವಂತೆ ಬಾಲಿಕೆಯ ತಂದೆಯ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ನಿಕ್ಕಿ ಯಾದವ್ ಹತ್ಯೆ ಪ್ರಕರಣ |  "...ಕ್ರೈಂ ಬ್ರಾಂಚ್ನ ಕ್ರಮ ಶ್ಲಾಘನೀಯ...ನಮ್ಮ ಸಮಯವು ಪರಿಪೂರ್ಣವಾಗಿತ್ತು, ನಾವು ಅದನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿದ್ದೇವೆ. ಅವರು ದೇಹವನ್ನು ವಿಲೇವಾರಿ ಮಾಡಿದ್ದರೆ, ಡಿಎನ್ಎ ಹೊಂದಾಣಿಕೆ, ಸಾಕ್ಷ್ಯಗಳ ಸಂಗ್ರಹ ಮತ್ತು ಆರೋಪಿಗಳಿಗೆ ಲಿಂಕ್ ಮಾಡಲು ಸಮಯ ತೆಗೆದುಕೊಳ್ಳುತ್ತದೆ..,  "ಎಸ್ಪಿಎಲ್ ಸಿಪಿ (ಅಪರಾಧ) ರವೀಂದ್ರ ಯಾದವ್ ಹೇಳಿದ್ದಾರೆ ಎಂದು ANI ಟ್ವೀಟ್ ಮಾಡಿದೆ.  

Read All News