ಸಿದ್ದರಾಮಯ್ಯರವರಿಂದ ಬೆಳಗಾವಿಯಲ್ಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ

  • 15 Jan 2024 , 1:41 AM
  • Belagavi
  • 145

ಬೆಳಗಾವಿ :ಗಾಂಧೀಜಿ ಸಾವಿನಲ್ಲಿ ವೀರ ಸಾವರ್ಕರ್ ಕೈವಾಡ ಇದೆ ಮತ್ತು  ಗೋಡ್ಸೆಯನ್ನು ಸಾವರ್ಕರ್ ಎಂದು ತಪ್ಪಾಗಿ ಅರ್ಥೈಸಿಕೊಂಡು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಸದನದೊಳಗೆ ವೀರ ಸಾವರ್ಕರ್ ಭಾವಚಿತ್ರ ಅಳವಡಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ
ಇವಾಗ ಏಕೆ ವೀರ ಸಾವರ್ಕರ್ ಫೋಟೋ ಹಾಕ್ತಾರೆ? ಅಗತ್ಯ ಇಲ್ಲ. ಇಲ್ಲಿವರೆಗೆ ಹಾಕಿಲ್ಲ ಇವಾಗ ಏಕೆ ಹಾಕಬೇಕು ?ಅದು ಕಾಂಟ್ರವರ್ಸಿ ವ್ಯಕ್ತಿತ್ವ  ಅಂತವರ ಫೋಟೋ ಹಾಕಿದ್ರೆ ಅವರ ಆತ್ಮಕ್ಕೆ ಶಾಂತಿ ಸಿಗಬೇಕಲ್ಲ ವೀರಸಾವರ್ಕರ್ ಮೊದಲೇ ವಿವಾದಾತ್ಮಕ ವ್ಯಕ್ತಿತ್ವ ಹೊಂದಿದವರು ಎಂದಿದ್ದಾರೆ .

ಫೋಟೊ ಸದನದಲ್ಲಿ ಹಾಕಿದ್ರೆ ಅವರ ಆತ್ಮಕ್ಕೆ ಶಾಂತಿ ಸಿಗಬೇಕಲ್ಲವೇ ಎಂದು ನಸುನಕ್ಕ ಸಿದ್ದರಾಮಯ್ಯ
ವೀರ ಸಾವರ್ಕರ್ ಫೋಟೊ ಸದನದಲ್ಲಿ ಅಳವಡಿಸುವುದು  ಅಗತ್ಯ ಇಲ್ಲ ಎಂದು ಹೇಳಿದ್ದಾರೆ.
ಫೋಟೊ ಅಳವಡಿಕೆ ಕಾರ್ಯಕ್ರಮಕ್ಕೆ ನನಗೇನು ಆಹ್ವಾನ ಬಂದಿಲ್ಲ ವೀರಸಾವರ್ಕರ್ ಫೋಟೊ ಅಳವಡಿಕೆ ವಿಚಾರವನ್ನು ಸರ್ವ ಸದಸ್ಯರ ಗಮನಕ್ಕೆ ತಂದಿಲ್ಲ
ಬಿಜೆಪಿ ನಾಯಕರು ತಮ್ಮ ಹಿಡನ್ ಅಜೆಂಡಾ ಸದನದೊಳಗೆ ಪ್ರಯೋಗ ಮಾಡುತ್ತಿದ್ದಾರೆ ಮತ್ತು  ವೀರಸಾವರ್ಕರ್ ಗಾಂಧಿಜಿ ಮರ್ಡರ್ ಕೇಸಲ್ಲಿ ಇರುವ ವ್ಯಕ್ತಿ ಎಂದು  ಸಿದ್ದರಾಮಯ್ಯ ಹೇಳಿದ್ದಾರೆ.

Read All News