ನಾಳೆ ಬೆಳಗಾವಿಯಲ್ಲಿ ಮತ್ತೊಂದು ಚುನಾವಣೆ

  • shivaraj bandigi
  • 8 Feb 2024 , 7:32 AM
  • Belagavi
  • 724

ಬೆಳಗಾವಿ : 

ಬೆಳಗಾವಿ ಬಾರ್ ಅಸೋಸಿಯೇಷನ್ ಗೆ ತನ್ನದೆಯಾದ ಇತಿಹಾಸ ಇದೆ. ಪಕ್ಷಾತೀತವಾಗಿ ನಡೆಯುತ್ತಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳ ಹಾಗೂ ಜಾತಿ ರಾಜಕಾರಣದ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರಾ ನೇರ ಚುನಾವಣೆ ನಡೆಯಲಿದ್ದು, ಚುನಾವಣೆಯ ಕಣ ರಂಗೇರಿದೆ.

ಬೆಳಗಾವಿಯಲ್ಲಿ ಚುನಾವಣೆ ನಡೆದರೆ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತದೆ. ಈಗ ಬೆಳಗಾವಿ ಬಾರ್ ಅಸೋಸಿಯೇಷನ್ ನಲ್ಲಿ ಲಿಂಗಾಯತ ಹಾಗೂ ಜೈನ್ ಸಮುದಾಯದ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿದ್ದು, ಇದರ ಜೊತೆಗೆ ರಾಷ್ಟ್ರೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಸಹ ಲಾಭಿ ನಡೆಸಿದ್ದು ಗುಟ್ಟಾಗಿ ಉಳಿದಿಲ್ಲ.

ಪ್ರತಿ ಚುನಾವಣೆಯಲ್ಲಿ ಹಿಂದುತ್ವ ಹಾಗೂ ಲಿಂಗಾಯತ ಮತಗಳನ್ನು ಪಡೆಯುವ ಬಿಜೆಪಿ ಅಧಿಕಾರ ಮಾತ್ರ ಬೇರೆ ಸಮುದಾಯದವರಿಗೆ ನೀಡಿ ಲಿಂಗಾಯತರಿಗೆ ಕಡೆಗಣಿಸುವುದು ಸರ್ವೇ ಸಾಮಾನ್ಯವಾಗಿದೆ. ಈಗ ನಡೆಯುತ್ತಿರುವ ಬಾರ್ ಅಸೋಸಿಯೇಷನ್ ಚುನಾವಣೆಯೂ ಹೊರತಾಗಿಲ್ಲ ಎನ್ನುವ ವಿಶ್ಲೇಷಣೆ ಲಿಂಗಾಯತ ಸಮುದಾಯದ ಮುಖಂಡರದ್ದಾಗಿದೆ.

ಬೆಳಗಾವಿ ಬಾರ್ ಅಸೋಸಿಯೇಷನ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರವಿರಾಜ ಪಾಟೀಲ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಸ್.ಎಸ್.ಕಿವಡಸಣ್ಣವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಶಾಸಕ, ಸಚಿವರ ದುಂಬಾಲು ಬಿದ್ದಿದ್ದಾರೆ.

ಬೆಳಗಾವಿ ಬಾರ್ ಅಸೋಸಿಯೇಷನ್ ನಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಿದೆ. ಇಲ್ಲಿ ಈ ಬಾರಿ ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿ ನಿಂತರು ಲಿಂಗಾಯತರಿಗೆ ಅಧ್ಯಕ್ಷರಾಗಬೇಕೆಂಬ ಕೂಗು ಇದ್ದರೂ ತೆರೆಮರೆಯಲ್ಲಿ ಜೈನ್ ಸಮುದಾಯದ ಬೆಂಬಲಿತ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಕೊಡಿಸುವ ಪ್ರಯತ್ನ ನಡೆದಿರುವುದು ಲಿಂಗಾಯತ ಸಮುದಾಯದ ಮುಖಂಡರನ್ನು ಕೆರಳಿಸುವಂತೆ ಮಾಡಿದೆ.

ಬೆಳಗಾವಿ ನಗರದ ಬಸವೇಶ್ವರ ವೃತ್ತದ ಬಳಿ ಇರುವ ತಿನ್ನಿಸು ಕಟ್ಟೆಯಲ್ಲಿಯೂ ಲಿಂಗಾಯತರಿಗೆ ಅನ್ಯಾಯವಾಗಿದೆ. ಇಲ್ಲಿಯೂ ಸಹ ಲಿಂಗಾಯತರನ್ನು ಕಡೆಗಣಿಸಿದೆ ಎಂದು ಲಿಂಗಾಯತ ಸಂಘಟನೆ ಆಕ್ರೋಧ ವ್ಯಕ್ತಪಡಿಸಿವೆ.

ಒಟ್ಟಾರೆ, ಫೆ.9 ರಂದು ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಕಣ ರಂಗೇರಿದೆ.

Read All News