ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಆರ್. ಬಿ.ತಿಮ್ಮಾಪುರಗೆ ಡಿಸಿಎಂ ಸ್ಥಾನ ನೀಡಿ

  • Krishna Shinde
  • 15 Jan 2024 , 3:48 AM
  • Raichur
  • 245

ಸಿಂಧನೂರು :ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಭೂತ ಪೂರ್ವ ಜಯ ಸಾಧಿಸಿಕೊಂಡು ಸರ್ಕಾರ ರಚನೆಗೆ ಮುಂದಾಗಿದ್ದು. ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯಾಗಲಿರುವ ಸಿದ್ದರಾಮಯ್ಯ ನೇತೃತ್ವದ  ಕಾಂಗ್ರೆಸ್ ಸರ್ಕಾರದಲ್ಲಿ  ಮಾಜಿ ಸಚಿವ ಆರ್. ಬಿ. ತಿಮ್ಮಾಪುರಗೆ ರಾಜ್ಯದ  ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಮಾದಿಗ ಸಮಾಜ  ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡೆಯಾದ ಮಹಾನಂದಿ ಕುರುಕುಂದ ಎ ಐ ಸಿ ಸಿ ಕಾಂಗ್ರೆಸ್  ಮುಖಂಡರುಗಳನ್ನು   ಒತ್ತಾಯಿಸಿದ್ದಾರೆ

ಗುರುವಾರ ಪತ್ರಿಕೆ ಹೇಳಿಕೆಯಲ್ಲಿ  ಅವರು  ಮಾತನಾಡಿ  ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಮೂರು ಬಾರಿ ಸಚಿವರಾಗಿ ಜಿಲ್ಲಾ ಉಸ್ತುವಾರಿಯಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ರಾಜ್ಯದಲ್ಲಿ ಜನಸೇವೆಗೆ ಬದ್ಧರಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ  ತೊಡಗಿದ್ದಾರೆ. ಹಾಗೂ ಉತ್ತರ  ಕರ್ನಾಟಕ ಭಾಗದ  ಪ್ರಭಾವಿ ನಾಯಕರಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಒಬ್ಬರಾಗಿದ್ದು. ಅವರಿಗೆ ಕಾಂಗ್ರೆಸ್ ಪಕ್ಷದಿಂದಲು  ಸಾಕಷ್ಟು ಬೆಂಬಲ ಪ್ರೋತ್ಸಾಹ ದೊರಕಿದೆ. ಮುಧೋಳ ಕ್ಷೇತ್ರದಲ್ಲಿ ಹಲವಾರು ಜನಪರ ಯೋಜನೆಗಳ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಸರ್ಕಾರ ರಚನೆಯಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಡಗೈ ಸಮುದಾಯದ ಹಿರಿಯ ರಾಜಕಾರಣಿ ಆರ್. ಬಿ. ತಿಮ್ಮಾಪುರಗೆ   ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡಗೆ  ಆಗ್ರಹಿಸಿದರು

Read All News