ಭೂಗತ ಪಾತಕಿ ಚೋಟಾ ರಾಜನ್ ಕೊರೋನಾಗೆ ಬಲಿ

  • 6 Jan 2024 , 4:53 AM
  • Delhi
  • 111

ದೆಹಲಿ: ಭೂಗತ ಲೋಕದಲ್ಲಿ ತನ್ನದೆಯಾದ ಛಾಪು ಮೂಡಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆ ಮರೆಸಿಕೊಂಡು ಕೊನೆಗೆ ಪೊಲೀಸರ ಅತಿಥಿಯಾಗಿದ್ದ ಚೋಟಾ ರಾಜನ್ ಕೊರೋನಾ ಸೋಂಕಿಗೆ ಬಲಿಯಾಗಿದ್ದಾನೆ.

ಭೂಗತ ಲೋಕದಲ್ಲಿ ಚೋಟಾ ರಾಜನ್ ಎಂದೇ ಕುಖ್ಯಾತನಾಗಿದ್ದ ಈತನ ಮೂಲ ಹೆಸರು ರಾಜೇಂದ್ರ ನಿಕಾಲ್ಜೆ. ಏಪ್ರಿಲ್ 26ರಂದು ಚೋಟಾ ರಾಜನ್‌ಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಕೂಡಲೇ ಆತನನ್ನು ಏಮ್ಸ್‌ಗೆ ದಾಖಲಿಸಲಾಗಿತ್ತು. ಭಾರತದಲ್ಲಿ ನಡೆದ ವಿವಿಧ ಪಾತಕ ಕೃತ್ಯಗಳಿಗೆ ಸಂಬಂಧಿಸಿದಂತೆ ಚೋಟಾ ರಾಜನ್‌ನನ್ನು ವಿಶ್ವಾದ್ಯಂತ ಹುಡುಕಾಡ್ತಿದ್ದ ಗೃಹ ಇಲಾಖೆ, 2015ರಲ್ಲಿ ಇಂಡೋನೇಷ್ಯಾದಲ್ಲಿ ಈತನನ್ನು ಬಂಧಿಸಿತ್ತು.

ವಿಚಾರಣೆ ಬಳಿಕ ದಿಲ್ಲಿಯ ತಿಹಾರ್ ಜೈಲಿನಲ್ಲಿ ಬಂಧಿಸಿ ಇಡಲಾಗಿತ್ತು. ಈ ವೇಳೆ ಚೋಟಾ ರಾಜನ್ ಕೊರೊನಾ ಸೋಂಕಿತನಾಗಿದ್ದ. ಕೊಲೆ ಸುಲಿಗೆ ಸೇರಿದಂತೆ 70ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್‌ಗಳು ಚೋಟಾ ರಾಜನ್ ಮೇಲಿದ್ದವು.

ಮಹಾರಾಷ್ಟ್ರದಲ್ಲಿ ಈತ ಹಲವು ಪಾತಕ ಕೃತ್ಯಗಳನ್ನು ಎಸಗಿದ್ದ. ಏಪ್ರಿಲ್ 26ರಂದು ಈತ ಕೊರೊನಾ ಸೋಂಕಿತನಾಗಿದ್ದಾನೆ ಎಂದು ದೃಢಪಟ್ಟ ಕೂಡಲೇ ಜೈಲು ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಆದರೆ ಶುಕ್ರವಾರ ಕೊರೋನಾ ಸೋಂಕಿನಿಂದ ಕೊನೆಯುಸಿರು ಏಳೆದಿದ್ದಾನೆ.

Read All News