ದೆಹಲಿ :ಚಲಾವಣೆಯಲ್ಲಿರುವ 2000 ರೂಪಾಯಿ ನೋಟುಗಳ ಪೈಕಿ ಶೇ 50ರಷ್ಟು ನೋಟುಗಳು ವಾಪಸು ಬಂದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಇಂದು ತಿಳಿಸಿದೆ. ವಾಪಸ್ ಬಂದಿರುವ ನೋಟುಗಳ ಮೌಲ್ಯ 1.8 ಲಕ್ಷ ಕೋಟಿ ರೂ ಆಗಿದೆ ಎಂದು ಆರಬಿಐ ತಳಿಸಿದೆ.
ಒಟ್ಟು ರೂ. 3.62 ಲಕ್ಷ ಕೋಟಿ ರೂ.2000 ನೋಟುಗಳು ಚಲಾವಣೆಯಲ್ಲಿದ್ದು, ಘೋಷಣೆಯ ನಂತರ ಸುಮಾರು 1.8 ಲಕ್ಷ ಕೋಟಿ ರೂ.2000 ನೋಟುಗಳು ವಾಪಸ್ ಬಂದಿವೆ.
ಇದು ಸರಿಸುಮಾರು ಮಾರ್ಚ್ 31 ರಂದು ಚಲಾವಣೆಯಲ್ಲಿದ್ದ 2000 ರೂಪಾಯಿಗಳ ಬ್ಯಾಂಕ್ ನೋಟುಗಳ ಸುಮಾರು 50% ಆಗಿದೆ , ಆದ್ದರಿಂದ 50% ಬ್ಯಾಂಕ್ ನೋಟುಗಳು ಹಿಂತಿರುಗಿವೆ ಎಂದು RBI ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.