41101 ರೂ ದಾಖಲೆ ಮೊತ್ತಕ್ಕೆ ಮರಾಟವಾದ ಅರುಶಿನ

  • shivaraj bandigi
  • 9 Mar 2024 , 6:04 PM
  • Belagavi
  • 1093

ಅಥಣಿ :ರಾಷ್ಟ್ರದಲ್ಲಿ ಸದ್ದು ಮಾಡಿದ ಕೋಹಳ್ಳಿ ಅರುಶಿನ 41101 ರೂ ದಾಖಲೆ ಬೆಲೆಗೆ ಮಾರಾಟವಾಗಿ ದೇಶದ ಗಮನ ಸೆಳೆದಿದೆ.

ಹೌದು,,, ಅಚ್ಚರಿ ಆದ್ರೂ ಇದು ಸತ್ಯ ,ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ರೈತ ಸೈಬಣ್ಣ ಭೂಪತಿ ಪೂಜಾರಿ ಅವರ ಅರುಶಿನ ಭಾರತದಲ್ಲಿ ಅಚ್ಚರಿಯ ದರಕ್ಕೆ ಮಾರಾಟವಾಗಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ ಪ್ರತಿ ಕ್ವಿಂಟಲ್ ಗೆ ಬರೋಬ್ಬರಿ 41101 ರೂ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

ಮೂರು ಎಕರೆ ಅರಿಶಿಣ ಬೆಳೆದ ರೈತ ಸೈಬಣ್ಣ ಪ್ರತಿ ಎಕರೆಗೆ 25-28 ಕ್ವಿಂಟಲ್ ಅರುಷಿನ ಇಳುವರಿ ಬಂದಿದ್ದು ರೈತನ ಶ್ರಮಕ್ಕೆ ವರದಾನವಾಗಿದೆ ಹಲವು ನಿರುದ್ಯೋಗಿ ಯುವಕರಿಗೆ ಈ ರೈತ ಮಾದರಿಯಾಗಿದ್ದಾನೆ ರೈತ ಸೈಬಣ್ಣನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದು ರೈತ ತನ್ನ ಸಂತಸ ವ್ಯಕ್ತಪಡಿಸಿದ್ದಾನೆ.

ವರದಿ  : ರಾಹುಲ್

Read All News