ಬೈಲಹೊಂಗಲ: ಅಬ್ಯಾಕಸ್ ಸ್ಪರ್ಧೆಯಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವದರ ಮೂಲಕ ನಾಡಿನ ಕೀರ್ತಿ ಬೆಳಗಿದ, ಪಟ್ಟಣದ ಆರ್ಯನ ರಾಜು ಸೊಗಲ ಇಂದು ಪುಣೆಯಲ್ಲಿ ಜರುಗಿದ 146ನೇ ರಾಜ್ಯ ಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಬೆಳಗಾವಿಯ ಜ್ಞಾನ ಪ್ರಬೋಧನ ಮಂದಿರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಯನ ಅಬ್ಯಾಕಸ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಹಲವಾರು ಪದಕಗಳನ್ನು ಪಡೆದು ನಾಡಿಗೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾನೆ.
ವರದಿ : ರವಿಕಿರಣ್ ಯಾತಗೇರಿ