ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂದಿಸಿದ ಅಥಣಿ ಪೊಲೀಸ್

  • 13 Jan 2024 , 9:23 PM
  • Belagavi
  • 209

ಅಥಣಿ :ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಥಣಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಅಥಣಿ ತಾಲೂಕಿನ ಎಪಿಎಂಸಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವಿಷಯವನ್ನು ತಿಳಿದು  ಅಥಣಿ ಪೊಲೀಸರು ಬೆಳಗಾವಿ ಎಸ್ ಪಿ ಸಂಜಯ್ ಪಾಟೀಲ್, ಸಿಪಿಐ ರವೀಂದ್ರ ನಾಯ್ಕೊಡಿ ಹಾಗೂ ಡಿ ವಾಯ್ ಎಸ್ ಪಿ ಶ್ರಿಪಾದ ಜಲ್ದೆ ಯವರ ಮಾರ್ಗದರ್ಶನದಂತೆ ಪಿಎಸ್ಐ ಶಿವಶಂಕರ ಮುಕ್ರಿ ಯವರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ. ಎಸ್. ಐ. ಅರೆರ, ರಮೇಶ ಹಾದಿಮನಿ, ಶ್ರೀಧರ ಭಾಂಗಿ, ಭೀಮಶಿ ಮನ್ನಾಪೂರ ಸಿಬ್ಬಂದಿಗಳ ತಂಡ ರಚಿಸಿ ತೀವ್ರ ಕಾರ್ಯಾಚರಣೆ ನಡೆಸುವ ಮೂಲಕ  ಆರೋಪಿ "ವಸಂತ ರಾಮಪ್ಪ ಹುಲ್ಯಾಳ" ವಯಸ್ಸು ೩೮ ಈತನನ್ನು ಬಂದಿಸಿ ಅರೋಪಿನಿಂದ ೧ ಕೆಜಿ ೪೫೦ ಗ್ರಾಂ. ಗಾಂಜಾ ಹಾಗೂ ಆರೋಪಿತನಿಂದ 450ರೂ.ಗಳನ್ನು ವಶಪಡಿಸಿಕೊಂಡಿದ್ದು  ಸದರಿ ಆರೋಪಿತನ ಮೇಲೆ  ಪಿಎಸ್ ಗುನ್ನ ನಂಬರ-49/2023 U/S ೨೦(B) NDPS Act ನೇ ದರಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವರದಿ ಅಜೀತ ಕಾಂಬಳೆ ಲೋಕಲ್ ವಿವ ನ್ಯೂಸ್ ಅಥಣಿ

Read All News