ಅಥಣಿ ಸಿಂಗಂ ಎಂದೆ ಪ್ರಖ್ಯಾತಿಯನ್ನು ಪಡೆದಿರುವ ಸಿಪಿಐ ಅವರು ಬಿಸನಕೊಪ್ಪ ಹಲ್ಯಾಳ ಗ್ರಾಮದಲ್ಲಿ ಗ್ರಾಮ ವಾಸ್ತವ್ಯವನ್ನು ಮುಗಿಸಿ ಗ್ರಾಮದಲ್ಲಿ ತಮ್ಮ ಪರವಾಗಿ ಬೀರುಸಿನ ಪ್ರಚಾರವನ್ನು ನಡೆಸಿದರು
ಮಾತನಾಡಿದ ಕೆ ಆರ್ ಪಿ ಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಬಸವರಾಜ್ ಬಿಸನಕೊಪ್ಪ ಅವರು ಈಗಾಗಲೇ ಹಲವಾರು ಗ್ರಾಮಗಳಿಗೆ ನಾನು ಭೇಟಿ ನೀಡಿದ್ದೇನೆ. ಜನರ ಸಮಸ್ಯೆಯನ್ನು ಆರಿಸಿದ್ದೇನೆ ನನಗೆ ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ನನಗಿದೆ ಈ ಚುನಾವಣೆಯಲ್ಲಿ ನನ್ನ ಗೆಲುವು ಶತಸಿದ್ಧ ಎಂದು ಹೇಳಿದರು
ನಂತರ ಮಾತನಾಡಿದ ಶಿವರಾಯ ಟೋಕರಿಕೋಳಿ ಬಿಸನಕೊಪ್ಪ್ ರಂತಹ ಅಥಣಿ ಮತಕ್ಷೇತ್ರಕ್ಕೆ ಅಭ್ಯರ್ಥಿ ಇರುವುದು ನಮ್ಮ ಪುಣ್ಯ ನೂರಾರು ಯುವಕರು ಇವರ ಜೊತೆಗಿದ್ದಾರೆ .ನಮ್ಮ ಪಕ್ಷವು ಯುವಕರ ಪಕ್ಷ ಎಂದೇ ಕರೆಯುತ್ತಿದ್ದಾರೆ ಆದ್ದರಿಂದ ಪ್ರಜ್ಞಾವಂತ ಮತದಾರರು ಬಿಸನಕೊಪ್ಪ ಸಾಹೇಬರಿಗೆ ಮತ ನೀಡಿ ಬರುವ ಚುನಾವಣೆಯಲ್ಲಿ ಬಹುಮತಿಗಳಿಂದ ಆರಿಸಿಕೊಡಬೇಕೆಂದು ಮನವಿ ಮಾಡಿದರು.