ಬೆಳಗಾವಿ : ಕರ್ನಾಟಕದ ಎರಡನೇ ರಾಜಧಾನಿ ಎಂದೇ ಹೆಸರಾಗಿರುವ ನಗರ, ಭರದಿಂದ ಕರ್ನಾಟಕ ರಾಜ್ಯೋತ್ಸವದ ಸಂಭ್ರಮಕ್ಕೆ ತಯಾರಿ ಆರಂಭಿಸಿದೆ.
ಇನ್ನೂ ಒಂದು ತಿಂಗಳು ಬಾಕಿ ಇರುವ ರಾಜ್ಯೋತ್ಸವದ ಆಚರಣೆಗೆ ಈಗಲೇ ಕೌಂಟ್‌ಡೌನ್ ಆರಂಭವಾಗಿದ್ದು ಸೋಶಿಯಲ್ ಮೀಡಿಯಾ ಪುಟಗಳು, ಇನ್‌ಫ್ಲುಯೆನ್ಸರ್‌ಗಳು ಹಾಗೂ ಸಾಮಾನ್ಯ ಪ್ರಜೆಗಳು ತಮ್ಮ ಸ್ಟೇಟಸ್‌ನಲ್ಲಿ ‘ಗ್ರ್ಯಾಂಡ್ ಸೆಲೆಬ್ರೇಶನ್’ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಕರ್ನಾಟಕ ರಾಜ್ಯೋತ್ಸವವೆಂದರೆ ರಾಜ್ಯದ ಸಂಸ್ಕೃತಿ, ಪರಂಪರೆ ಮತ್ತು ಐಕ್ಯತೆಯನ್ನು ಹೆಮ್ಮೆಯಿಂದ ತೋರುವ ದಿನ. ಪ್ರತಿ ವರ್ಷ ನವೆಂಬರ್ 1 ರಂದು ಹಮ್ಮಿಕೊಳ್ಳುವ ಈ ಹಬ್ಬಕ್ಕೆ, ಬೆಳಗಾವಿಯ ಜನತೆ ಹೆಚ್ಚು ಉತ್ಸಾಹದಿಂದ ತಯಾರಿ ನಡೆಸುತ್ತಾರೆ. ‘ಕರ್ನಾಟಕದ ಎರಡನೇ ರಾಜಧಾನಿ’ ಎಂದು ಕರೆಯಲ್ಪಡುವ ಬೆಳಗಾವಿ, ಈ ವರ್ಷವೂ ಹೆಚ್ಚಿನ ಸಂಭ್ರಮಾಚರಣೆಗೆ ಸಾಕ್ಷಿಯಾಗಲಿದೆ.
ಪ್ರತಿ ಬಾರಿಯಂತೆಯೇ, ವಿವಿಧ ಪಟಾಕಿ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ವಿವಿಧ ಸಂಘಟನೆಗಳ ಮುಕ್ತಾಯಯಾತ್ರೆಗಳು ನಗರದ ರಾಜಮಾರ್ಗಗಳಲ್ಲಿ ನಡೆಯಲಿವೆ.
ಸಾರ್ವಜನಿಕರು, ಯುವಕರು ಮತ್ತುInfluencers ಕೂಡ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯೋತ್ಸವದ ಕುರಿತಾದ ಪೋಸ್ಟ್‌ಗಳು, ವಿಡಿಯೋಗಳು, ಹಾಗೂ ಸಂಭ್ರಮದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದು, ಈ ಬಾರಿ ಅದ್ಧೂರಿ ಆಚರಣೆಗೆ ಸಾಕ್ಷಿಯಾಗಲು ನಾವು ಸಜ್ಜಾಗಿದ್ದೇವೆ ಎಂದು ತಿಳಿಸುತ್ತಿದ್ದಾರೆ.
ಈ ವರ್ಷದ ಕರ್ನಾಟಕ ರಾಜ್ಯೋತ್ಸವ, ಬೆಳಗಾವಿ ನಗರದಲ್ಲಿ ಇತಿಹಾಸ ಸೃಷ್ಟಿಸಲು ತಯಾರಾಗಿದ್ದು, ಜನತೆ ‘ಬಿಗ್ ಸೆಲೆಬ್ರೇಶನ್’ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಬನ್ನಿ ಎಲ್ಲರೂ ಕೈಜೋಡಿಸಿ ಅದ್ದೂರಿ ಆಚರಣೆಗೆ ಸಾಕ್ಷಿಯಾಗಿ ಕನ್ನಡತನವನ್ನು ಮೆರೆಯೋಣ.
ಜೈ ಕನ್ನಡ
ಜೈ ಭುವನೇಶ್ವರಿ