ಬೆಳಗಾವಿ: ಅತ್ಯವಶ್ಯಕ ಸಹಾಯ ಮಾಡುವ ಮೂಲಕ ಒಬ್ಬರ ಜೀವನದಲ್ಲಿ ನೆಮ್ಮದಿ ಮೂಡಿಸುವದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ .ಇದೇ ಉದ್ದೇಶದೊಂದಿಗೆ ನಾವಿಂದು ರವಿವಾರ ಪೇಟೆಯ ತರಕಾರಿ ಮಾರುವ ಮಹಿಳೆಯರನ್ನು ಭೇಟಿಯಾದೆವು.
ನಾವು ಬೆಳಗಾವಿ ಮಹಿಳಾ ಉದ್ಯಮಿಗಳೆಲ್ಲ ಸೇರಿ, ತಮ್ಮ ಜೀವನ ನಿರ್ವಹಣೆಗಾಗಿ ತರಕಾರಿ ಮಾರುವ ಮಹಿಳೆಯರಿಗೆ ಪ್ರಾಶಸ್ತ್ಯ ನೀಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ನ್ನು ಆಚರಿಸಿದೆವು.
ದೇಶಾದ್ಯಂತ ಆಝಾದಿ ಕಾ ಅಮೃತ ಮಹೋತ್ಸವ ಆಚರಿಸಲಾಗುತ್ತಿರುವ ಸಂದರ್ಭದಲ್ಲಿ ನಾವು ಆರ್ಥಿಕವಾಗಿ ಹಿಂದುಳಿದ ಈ ಮಹಿಳೆಯರೊಂದಿಗೆ ಧ್ವಜಾರೋಹಣ ನೆರವೇರಿಸುವ ಮೂಲಕ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಿದೆವು.
ಸುಮಾರು ೭೦ ತರಕಾರಿ ಮಾರಾಟಗಾರರು,ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಪಿಂಕ್ ಟಾಯ್ಲೆಟ್ ಪರಿಸರದಲ್ಲಿ ಈ ಕಾರ್ಯಕ್ರಮ ನೆರವೇರಿತು. ಸಾಮಾಜಿಕ ಕಾರ್ಯಕರ್ತೆ ,ಮೈತ್ರಿ ಆಫೀಸರ್ಸ ಲೇಡಿಜ್ ಕ್ಲಬ್ ಅಧ್ಯಕ್ಷರು ಆಗಿರುವ ಮೈತ್ರಿ ಬಿಶ್ವಾಸ್,ಜೋತ್ಸ್ನಾ ದತ್ತಾ,ಲಘು ಉದ್ಯೋಗ ಭಾರತಿಯ ಉಪ ಕಾರ್ಯದರ್ಶಿ ಪ್ರಿಯಾ ಪುರಾಣಿಕ್ ,ನಳಿನಿ ವೇಮುಲಕರ,ಸರೋಜ ಕುರಬೇಟ,ಸುಮನ್ ಕುಲಕರ್ಣಿ ,ಅರ್ಚನಾ ನಲವಡೆ ಸೇರಿದಂತೆ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು