ಬೈಲಹೊಂಗಲ: 'ಪಟ್ಟಣದ ಎಂ ಎಂ ಎಸ್ ಎಸ್ ಆರ್ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ ಬೆಳಿಗ್ಗೆ ಆನಿಗೋಳ ಗ್ರಾಮದ ಮಾ ಭಾರತಿ ಸೇವಾ ಪೌಂಡೇಶನ್ ವತಿಯಿಂದ ಸ್ವಾತಂತ್ರೋತ್ಸವ ಅಂಗವಾಗಿ ಬೃಹತ್ ಕೆ ಎ 24 ಮ್ಯಾರಾಥನ್ ಜರುಗಿತು.
ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಮ್ಯಾರಾಥಾನದಲ್ಲಿ ವಯಸ್ಸಿನ ಇತಿ ಮಿತಿ ಇಲ್ಲದೆ ಯುವಕ ಯುವತಿಯರು ಮಕ್ಕಳು ಹುರುಪು, ಹುಮ್ಮಸ್ಸಿನಿಂದ ಭಾಗವಹಿಸಿದ್ದರು.
ಫೌಂಡೇಷನ್ ಅಧ್ಯಕ್ಷ ಸುನೀಲ ಮರಕುಂಬಿ ಮಾತನಾಡಿ, ಸ್ವಾತಂತ್ರ್ಯೋತ್ಸವದ ನಿಮಿತ್ಯವಾಗಿ ಮಾರಾಥ್ಯಾನ ಆಯೋಜಿಸಲಾಗಿದ್ದು, ನಮಗರ ಹಾಗೂ ಸುತ್ತಮುತ್ತಲಿನ ಜನರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದರು.
ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಿಂದ ಇಂಚಲ ಗ್ರಾಮದ ಆಯುರ್ವೇದಿಕ ಮಹಾವಿದ್ಯಾಲಯವರೆಗೆ ಸುಮಾರು 7 ಕಿ.ಮೀ. ಮ್ಯಾರಾಥನ ನಡೆಯಿತು.
ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಮಹಾಂತೇಶ ದೊಡಗೌಡ್ರ, ಉದ್ಯಮಿ ವಿಜಯ ಮೆಟಗುಡ್ಡ, ಫೌಂಡೇಶನ್ ಅಧ್ಯಕ್ಷ ಸುನೀಲ ಮರಕುಂಬಿ, ಡಾ ಮಂಜುನಾಥ ಮುದುಕನಗೌಡ್ರ, ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಅನೇಕರು ಭಾಗಿಯಾಗಿದ್ದರು.