ಬೆಳಗಾವಿ :ಹೌದು ಕೆಲವೊಂದು ದಿನಗಳಿಂದ ಅನ್ಯ ನಂಬರ್ ಇಂದ ಕರೆ ಅಥವಾ ಮೆಸೇಜಗಳು ಜನ ಸಾಮಾನ್ಯರ ಮೊಬೈಲಗಳಿಗೆ ಬರುತಿದ್ದು ಕಿಡಿಗೇಡಿಗಳು ಬಿಲ್ ತುಂಬದಿದ್ದರೆ ಮನೆಯ ಕರೆಂಟ್ ಸ್ಥಗಿತಗೊಳಿಸುತ್ತೇವೆ ಎಂದು ಹೆದರಿಸುತಿದ್ದಾರೆ.
ಲೋಕವಿವ ತಂಡದೊಂದಿಗೆ ತನ್ನ ಕಳಕಳಿ ಹಂಚಿಕೊಂಡ ಒಬ್ಬ ಜನ ಸಾಮಾನ್ಯ್ ನಾನು ಕರೆಂಟ್ ಬಿಲ್ ನಿಯಮಿತವಾಗಿ ತುಂಬುತ್ತಿದ್ದೇನೆ ಮತ್ತು ಯಾವದೇ ತಿಂಗಳು ಮಿಸ್ ಕೂಡ ಮಾಡಿಲ್ಲ ಆದರೂ ನನಗೆ ಈ ತರ ಮೆಸೇಜ್ ಮತ್ತು ಕಾಲ್ ಬಂದಿದೆ ಎಂದು ಹೇಳಿದ್ದಾರೆ.
ನಾವು ಕೂಡ ಆ ನಂಬರಗೆ ಕಾಲ್ ಮಾಡಿ ಪರೀಕ್ಷಿಸಿದರೆ ನಂಬರ್ ಸ್ವಿಚಆಫ್ ಅನ್ನುತ್ತಿದೆ ಕೆಇಬಿ ಅಧಿಕಾರಿ ಮುಂದೆ ಹೇಳಿದಾಗ ಇದು ಒಂದು ಸ್ಕ್ಯಾಮ್ ಕಾಲ್ ದಯವಿಟ್ಟು ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಏನೆ ಆಗಲಿ ಸಾಮಾನ್ಯ ಜನತೆ ಮೋಸ ಹೋಗುವ ಮುಂಚೆ ಕೆಇಬಿ ಇಂಥವರ ವಿರುದ್ದ ಕಠಿಣ್ ಕ್ರಮ ತೆಗೆದುಕೊಳ್ಳಬೇಕು ಮತ್ತು ನೀವು ಕೂಡ ಯಾವುದೇ ಸ್ಕ್ಯಾಮ್ ಕಾಲಗೆ ಮೋಸ ಹೋಗದಿರಿ ಎಂದು ಕೇಳಿಕೊಳ್ಳುತ್ತೇವೆ.