ಬೆಳಗಾವಿ ಬ್ರೇಕಿಂಗ್ : ಗುಜರಿ ಅಂಗಡಿಗೆ ಬೆಂಕಿ - ಕಿಡಿಗೇಡಿಗಳ ಕೈವಾಡ ಶಂಕೆ!

  • krishna shinde
  • 9 Feb 2024 , 5:29 AM
  • Belagavi
  • 591

ಬೆಳಗಾವಿ:ನಗರದ ವಡಗಾಂವನ ಡೊರ್ ಗಲ್ಲಿಯಲ್ಲಿರುವ ಗುಜರಿ ಅಂಗಡಿಗೆ ಕಿಡಿಗೇಡಿಗಳಿಂದ ಬೆಂಕಿ ಹಚ್ಚಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಶುಕ್ರವಾರ ಬೆಳಗ್ಗೆ ತಿಳಿದುಬಂದಿದೆ.

ಬೆಳಗಿನ ಜಾವ 5.30ರ ಸುಮಾರಿಗೆ ಘಟನೆ ನಡೆದಿದೆ. ತಗಡು, ಕಬ್ಬಿಣ, ರದ್ದಿ ಪೇಪರ್, ವಾಹನಗಳ ಬಿಡಿ ಭಾಗಗಳು ಸೇರಿದಂತೆ ಮೊಡಕಾ ಇರುವ ಶಾಪ್‌ಗೆ ಬೆಂಕಿ ತಗುಲಿದೆ. ಕಳೆದ ಎರಡು ಗಂಟೆಯಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹೆಣಗಾಡುತ್ತಿದ್ದಾರೆ.

ಸ್ಥಳ: ಡೊರ್ ಗಲ್ಲಿ, ವಡಗಾಂವ, ಬೆಳಗಾವಿ
ಸಮಯ: ಶುಕ್ರವಾರ ಬೆಳಗ್ಗೆ 5.30
ನಷ್ಟ: ಲಕ್ಷಾಂತರ ರೂಪಾಯಿ
ಸ್ಥಿತಿ: ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ
ಕಾರಣ: ಕಿಡಿಗೇಡಿಗಳ ಕೈವಾಡ ಶಂಕೆ
ಪೊಲೀಸ್ ಠಾಣೆ: ಶಹಾಪುರ

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಮತ್ತು ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಲಾಗಿದೆ.ಘಟನೆ ಸಂಬಂಧಿಸಿದಂತೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read All News