ಬೆಂಗಳೂರು :ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ರಾಷ್ಟ್ರೀಯ ಜೀವನೋಪಾಯ ಅಭಿಯಾನ ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನವತಿಯಿಂದ 2022-23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಸಾಧನೆಯ ಪ್ರಶಸ್ತಿ ನಗರದ ವಸತಿ ರಹಿತರಿಗೆ ಆಶ್ರಯ ಉಪಘಟಕದಡಿ ಪ್ರಥಮ ಸ್ಥಾನ ಮಹಾನಗರ ಪಾಲಿಕೆ ಬೆಳಗಾವಿಗೆ ದೊರಕಿದೆ.
ರಾಜ್ಯ ಮಟ್ಟದ ಪ್ರಥಮ ಸ್ಥಾನದ ಪ್ರಶಸ್ತಿಯನ್ನು ಮಹಾನಗರ ಪಾಲಿಕೆ ಬೆಳಗಾವಿ ಆಯುಕ್ತರ ಪರವಾಗಿ ಉಪ ಆಯುಕ್ತೆ (ಆಡಳಿತ) ಶ್ರೀಮತಿ ಭಾಗ್ಯಶ್ರೀ ಹುಗ್ಗಿ ಹಾಗು ಡೇ ನಲ್ಮ ಯೋಜನೆಯ ಸಮುದಾಯ ವ್ಯವಹಾರ ಅಧಿಕಾರಿಗಳಾದ ಶ್ರೀ ಪ್ರಕಾಶ ಎಂ ಮರಕಟ್ಟಿಯವರು ಸ್ವೀಕರಿಸಿದ್ದಾರೆ.ಈ ಪ್ರಶಸ್ತಿಯು ರೂ.1.25 ಲಕ್ಷ ನಗದು ಹಾಗು ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರ ಒಳಗೊಂಡಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಸಿಎಂ ಬಸವರಾಜ್ ಬೊಮ್ಮಾಯಿ , ಕರ್ನಾಟಕದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಅಶ್ವಥ್ ನಾರಾಯಣ ಮತ್ತು ಅನೇಕ ಗಣ್ಯರು ಭಾಗಿಯಾಗಿದ್ದರು.