ಬೆಳಗಾವಿ: 2022 ರ ಚಳಿಗಾಲ ಅಧಿವೇಶನ ಡಿಸೆಂಬರ್ 19 ರಿಂದ 30 ವರೆಗೆ ನಡೆದಿದ್ದು, ಬೆಂಗಳೂರು ಆದಿಯಾಗಿ ರಾಜ್ಯದ ಅನೇಕ ಭಾಗಗಳಿಂದ ಕರ್ತವ್ಯಕ್ಕಾಗಿ ಸಿಬ್ಬಂದಿಗಳು ಬೆಳಗಾವಿಗೆ ಆಗಮಿಸಿದ್ದರು.
ಅಂತಹ ಬಹುತೇಕ ಸಿಬ್ಬಂದಿಗಳಿಗೆ ಬೆಳಗಾವಿಯ ಸಾಹುಕಾರ, ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರು ಸುಮಾರು ಸಾವಿರ ಕೆಜಿ ಅಷ್ಟು ಗೋಕಾಕಿನ ಸುಪ್ರಸಿದ್ದ ಸಿಹಿಯಾದ ಕರದಂಟನ್ನು ಅಧಿವೇಶನದ ಸವಿನೆನಪಿನ ಸಿಹಿಯಾಗಿ ನೀಡಿದ್ದಾರೆ.
ಪತ್ರಕರ್ತರಿಗೆ, ಮಾರ್ಷಲ್ಗಳಿಗೆ, ಸದನ ಸಿಬ್ಬಂದಿಗಳಿಗೆ, ಅಧಿವೇಶನ ಕೆಲಸದಲ್ಲಿ ಭಾಗಿಯಾದ ಇನ್ನು ಹಲವಾರು ವಿಭಾಗದ, ಬಹುತೇಕ ಸಿಬ್ಬಂದಿಗಳಿಗೆ ಕರದಂಟು ಸಿಹಿಯನ್ನು ಬಾಲಚಂದ್ರ ಜಾರಕಿಹೊಳಿ ಅವರು ವಿತರಿಸಿದ್ದಾರೆ.
ಅಧಿವೇಶನ ಮುಗಿಸಿ, ಮಂದಹಾಸ ಬೀರುತ್ತಾ ಹೋಗುತ್ತಿರುವ ಎಲ್ಲಾ ಸಿಬ್ಬಂದಿಗಳಿಗೂ ಸಿಹಿ ನೀಡಿದ, ಸಕ್ಕರೆ ನಾಡಿನ ಅಕ್ಕರೆ ದೊರೆಯಾದ ಬಾಲಚಂದ್ರ ಜಾರಕಿಹೊಳಿ ಅವರಿಗೊಂದು ಅಭಿನಂದನೆ.
ವರದಿ ಪ್ರಕಾಶ್ ಕುರಗುಂದ..