ಬೆಳಗಾವಿ : ಡ್ರೈನೈಜ ಸುದ್ದಿಗೆ ಸ್ಪಂದಿಸಿದ ಶ್ರೀನಗರ ಹಾಗು ಮಹಾಂತೇಶ ನಗರದ ನಿವಾಸಿಗಳು ತಮ್ಮ ಮುಂದೆ ನಡೆಯುತ್ತಿರುವ ಅವ್ಯವಸ್ಥೆ ಬಗ್ಗೆ ದನಿ ಎತ್ತಿದ್ದಾಗಿ ಲೋಕಲವಿವ ತಂಡಕ್ಕೆ ಅಭಿನಂದಿಸುತ್ತಾ ಇನ್ನು ಕೆಲವು ಅವ್ಯಸ್ಥೆಗಳ ಬಗ್ಗೆ ಜನತೆಯ ಪರವಾಗಿ ದನಿ ಎತ್ತಲು ಕರೆ ನೀಡಿದ್ದಾರೆ.
ವಾರ್ಡನ ನಿವಾಸಿಗಳು ಒಬ್ಬಬ್ಬರಾಗಿ ತಮ್ಮ ಸುತ್ತಮುತ್ತಲಿನ ಅವ್ಯಸ್ಥೆಗಳ ಬಗ್ಗೆ ನಮ್ಮ ತಂಡಕ್ಕೆ ತಿಳಿಸುತ್ತ ತಮಗಾಗುತ್ತಿರುವ ಅನ್ಯಾಯ ಹಾಗು ಅವವ್ಯಸ್ಥೆ ಬಗ್ಗೆ ತಿಳಿಸಿದ್ದಾರೆ.
ಶ್ರೀನಗರದಲ್ಲಿನ ಅವ್ಯವಸ್ಥೆಗಳು : ಸರಿಯಾದ ವಿದ್ಯುತ್ ಬೆಳಕು ಇಲ್ಲದಿರುವುದು , ಸರಿಯಾದ ಆಸನ ವ್ಯವಸ್ಥೆ ಇಲ್ಲದಿರುವುದು ,ಬಿದ್ದು ಹೋಗಿರುವ ಗಾರ್ಡನ್ ಹಿಂಬದಿಯ ಕಾಂಪೌಂಡ್ ಗೋಡೆ,ಹಿರಿಯ ನಾಗರಿಕರಿಗಾಗಿ ಮೂತ್ರಾಲಯ ವ್ಯವಸ್ಥೆ ಇಲ್ಲದಿರುವುದು ,ಲಕ್ಷಾನುಗಟ್ಟಲೇ ವ್ಯಯಿಸಿ ನಿರ್ಮಿಸಿದ ಸಂಗೀತ ಮಯ ಬಣ್ಣದ ಬೆಳಕಿನ ಕಾರಂಜಿ ವರ್ಷಗಳೇ ಆದರೂ ಸಾರ್ವಜನಿಕರಿಗೆ ಮನರಂಜನೆಗೆ ಮುಕ್ತವಾಗದೇ ಇರುವುದು.
ಯೋಗ್ಯವಲ್ಲದ ಒಳ ರಸ್ತೆಗಳು ಹಾಗೂ ಡಬಲ್ ರೋಡ್ ಮತ್ತು ಗಾರ್ಡನ್ ಗೋಡೆಗುಂಟ ಇರುವ ಬಿದಿರುಗಳ ಬಳಿ (ಟೆಂಪುಗಳು ನಿಲ್ಲುವ ಜಾಗದ ಹಿಂದೆ).
ಹಾಡು ಹಗಲೇ ಜನರು ಮೂತ್ರ ವಿಸರ್ಜಿಸುವ ಕಾರಣ ಗಾರ್ಡನ್ ಒಳಗೂ- ಹೊರಗೂ ಗಬ್ಬುನಾತ.
2)ಕಾಂಪೌಂಡ್ ಗೋಡೆ ಬಿದು 4 ವರ್ಷ ಕಳೆದರು ಹಿಂದೆ ತಿರುಗಿ ನೋಡದ ಸಂಬಂಧ ಪಟ್ಟ ಅಧಿಕಾರಿಗಳಿಗೆ .
3)ಸಿಮೆಂಟ್ ಕಾಂಪೌಂಡ ಬದಲು ತೆಂಗಿನಕಾಯಿ ಗರಿ ಹಾಕಲಾಗಿದೆ.
5) ಉದ್ಯಾನದಲ್ಲಿ ತ್ಯಾಜ್ಯ ಮತ್ತು ಕಸವನ್ನು ತೋಟದ ಮೂಲೆಯಲ್ಲಿ ಸುರಿದು ನಂತರ ಅದನ್ನು ದಿನನಿತ್ಯ ಸುಡುತ್ತಿದ್ದು, ಇದರಿಂದ ವಾಯು ಮಾಲಿನ್ಯ ಉಂಟಾಗುತ್ತಿದ್ದು, ಆ ಹೊಗೆಯಿಂದ ಜನರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ.
5) ರಾತ್ರಿ ವೇಳೆ ಮದ್ಯ ವೆಸನಿಗಳ ಪಾರ್ಟಿ ತಾಣವಾಗಿದೆ ಬೆಳಗಾವಿ ಶ್ರೀನಗರ್ ಗಾರ್ಡನ ಎಂದು ಹೇಳಿದ್ದಾರೆ.
6) ಕಾಂಗ್ರೆಸ್ ಸರ್ಕಾರ ಪ್ರಾರಂಭ ಮಾಡಿದ್ದ ಹೈ ಟೆನ್ಶನ್ ಕೇಬಲ್ ಕೆಳಗಿನ ಗಾರ್ಡನ್ ವ್ಯವಸ್ಥೆ ಸಂಪೂರ್ಣ ನೀರು ಪಾಲಾಗಿದ್ದು “ಶೇಠರವರಿಂದ ಪ್ರಾರಂಬವಾದ ಪ್ರಾಜೆಕ್ಟ ಶೇಠರವರಿಂದಲೆ ಮುಕ್ತಾಯವಾಗುವುದಾ” ಎಂದು ಜನರಲ್ಲಿ ಪ್ರಶ್ನೆ ಮೂಡಿದೆ.
ಇನ್ನು ಹಲವು ತೊಂದರೆಗಳ ಕುರಿತು ಮಹಾನಗರ ಸಭೆ ಗಮನಕ್ಕೆ ತರುವ ಪ್ರಯತ್ನ ಮಾಡಿದರು ಯಾವದೇ ಉಪಯೋಗವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ ಮತ್ತು ಗಾರ್ಡನ್ ನಿನ್ ಹಿರಿಯ ನಾಗರಿಕರ ಸಂಘದ ಮೇಲಿನ ಅವ್ಯವಸ್ಥೆ ಕುರಿತಾಗಿ ಸಂಬಂಧಿಸಿದವರಿಗೆ ಈಗಾಗಲೇ ಅನೇಕ ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.