ಬೈಲಹೊಂಗಲ : ರಾಜ್ಯ ರಾಜಕಾರದ ದಿಕ್ಕು ಬದಲಾಗುತ್ತಿರುವ ಸಮಯದಲ್ಲಿ ಬೆಳಗಾವಿ ಜಿಲ್ಲೆಗೆ ಬೇಕಾಗಿದೆ ಪ್ರಾಶಸ್ತ್ಯ.
ರಾಜ್ಯದ ರಾಜಧಾನಿ ಬೆಂಗಳೂರು ಬಿಟ್ಟರೆ ಅತೀ ಹೆಚ್ಚಿನ ಶಾಸಕರನ್ನು ಹೊಂದಿರುವ ಜಿಲ್ಲೆ ಬೆಳಗಾವಿ, 18 ಶಾಸಕರಿರುವ ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕನಿಷ್ಠ 5-6 ಸಚಿವ ಸ್ಥಾನ ಸಿಗಬೇಕಾಗಿರುವದು ಸೂಕ್ತ.
ರಾಜ್ಯದಲ್ಲಿ ಆಡಳಿತ ನಡೆಸುವ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ಕಲ್ಪಿಸುವ ಬೆಳಗಾವಿ ಜಿಲ್ಲೆ ರಾಜ್ಯದ ಎರಡನೇಯ ರಾಜಧಾನಿ ಎಂಬ ಬಿರುದು ಇದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಲ್ಲದೆ ಭೌಗೋಳಿಕವಾಗಿ ಅತಿ ದೊಡ್ಡ ಜಿಲ್ಲೆ, ಅಲ್ಲದೆ 16 ತಾಲೂಕು ಕೇಂದ್ರ, 3 ದೊಡ್ಡ ಉಪವಿಭಾಗಗಳು, ಐತಿಹಾಸಿಕ ಸಂಗೊಳ್ಳಿ ರಾಯಣ್ಣನ, ವೀರರಾಣಿ ಕಿತ್ತೂರು ಚೆನ್ನಮ್ಮನವರ, ಶ್ರೀಕ್ಷೇತ್ರ ಸವದತ್ತಿ ಎಲ್ಲಮ್ಮ, ಸೊಗಲ ಸೋಮೇಶ್ವರ ದೇವಸ್ಥಾನ ಮೊದಲಾದ ಪ್ರದೇಶಗಳಿಗೆ ಪ್ರಸಿದ್ದವಾದ ಜಿಲ್ಲೆಗೆ ಹಾಗೂ ಅದರ ಅಭಿವೃದ್ಧಿಯ ಕುರಿತು ಯೋಚಿಸುವದಾದರೆ ಹೆಚ್ಚಿನ ಸಚಿವ ಸ್ಥಾನ ನೀಡಿ ಜಿಲ್ಲೆಗೆ ಆದ್ಯತೆ ನೀಡಬೇಕಾಗಿರುವದು ಸದ್ಯದಲ್ಲೇ ಬರುವ ನೂತನ ಸರ್ಕಾರದ ಮೇಲಿದೆ.
ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿ, ಮೂರು ತಲೆಮಾರಿನವರೆಗೂ ಸರ್ಕಾರದ ಭಾಗವಾಗಿರುವ ಬೈಲಹೊಂಗಲದ ಕೌಜಲಗಿ ಕುಟುಂಬಕ್ಕೆ ಆದ್ಯತೆ ನೀಡಿ ಶಾಸಕ ಮಹಾಂತೇಶ ಕೌಜಲಗಿ ಅವರಿಗೂ ಸಹ ಮಂತ್ರಿ ಸ್ಥಾನ ನೀಡಿ ಅವರ ಕುಟುಂಬದ ರಾಜಕೀಯ ಸೇವೆ ಸ್ಮರಿಸಬೇಕು, ಆಥಣಿಯ ಲಕ್ಷ್ಮಣ ಸವದಿ ಬಿಜೆಪಿಯಲ್ಲಿದ್ದಾಗ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವರಾಗಿ ಅನುಭವ ಹೊಂದಿದವರು ಅಲ್ಲದೆ ಇಂತಹ ಸಾಕಷ್ಟು ಅನುಭವಿ ಶಾಸಕರನ್ನು ನೀಡಿರುವ ಗಡಿಭಾಗ ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಪ್ರತಿನಿಧ್ಯ ನೀಡಿ ಸಚಿವರ ಸಂಖ್ಯೆ ಹೆಚ್ಚಿಸಿ ಜಿಲ್ಲೆಯಸಮಗ್ರ ಅಭಿವೃದ್ಧಿಗೆ ಹೊಸ ಸರ್ಕಾರ ಶ್ರಮಿಸಲಿ ಎನ್ನುವದು ಸಮಸ್ತ ಉತ್ತರ ಕರ್ನಾಟಕ ಭಾಗದ ಬಹು ಜನರ ನಿರಿಕ್ಷೆ.
ವರದಿಗಾರ : ರವಿಕಿರಣ್ ಯಾತಗೇರಿ