ಬೆಳಗಾವಿ : ಗಣೇಶ ಚತುರ್ಥಿಯಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸೌಹಾರ್ದತೆಯ ಸಂದೇಶ ರವಾನೆ ಮಾಡಿದ್ದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, 11 ದಿನದ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆಯ ಕಾರ್ಯಕ್ರಮದ ವೇದಿಕೆಯಲ್ಲಿ ತಾವು ಧರಿಸಿದ್ದ ಶೂ ಬಿಟ್ಟು ವೇದಿಕೆಯ ಮೇಲೆ ಕುಳಿತು ಗಣೇಶನಿಗೆ ಭಕ್ತಿಯ ಗೌರವ ಸೂಚಿಸಿದ್ದು ಅಲ್ಲಿದ್ದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ವೇದಿಕೆಯ ಮೇಲೆ ಎಲ್ಲ ಪಕ್ಷದ ಶಾಸಕ, ಮಾಜಿ ಶಾಸಕರು ಇದ್ದರೂ ಸಹ ಎಲ್ಲರೂ ಚಪ್ಪಲ್ಲಿ, ಶೂ ಧರಿಸಿದ್ದರು. ಆದರೆ ಡಿಸಿ ರೋಷನ್ ಈ ನಡೆಗೆ ನೆರೆದಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಮೊಹಮ್ಮದ್ ರೋಷನ್ ಬೆಳಗಾವಿಯ ಸಾರ್ವಜನಿಕ ಗಣೇಶ ವಿಸರ್ಜನೆಯನ್ನು ಅದ್ಧೂರಿಯಾಗಿ ಸಂಭ್ರಮದಿಂದ ಶಾಂತಿ ಮತ್ತು ಸೌಹಾರ್ದತೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ಆಚರಣೆ ಮಾಡೋಣ ಎಂದು ಸಂದೇಶ ಸಾರಿದರು.