ಬೆಳಗಾವಿ : ಲೋಕಸಭೆ ಟಿಕೇಟ್ ಘೋಷಣೆ ಆದ ನಂತರ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಜಗದೀಶ ಶೆಟ್ಟರ ಅವರನ್ನು ಸಾವಿರಾರು ಯುವಕರು ಬೈಕ್ ರ್ಯಾಲಿ ಮುಖಾಂತರ ಅವರನ್ನು ಸ್ವಾಗತಿಸಿದರು.
ರ್ಯಾಲಿಯನ್ನು ಉದ್ದೇಶಿಸಿ, ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಮಾತನಾಡಿ, ಕಾಂಗ್ರೇಸನವರಿಗೆ ಮಾತನಾಡಲಿಕೆ ಯಾವುದೇ ವಿಷಯ ಇಲ್ಲಾ. ಅಂಜುವವರ ಮೇಲೆ ಕಪ್ಪೆ ಎಸೆಯುವದು ಅವರ ಜಾಯಮಾನವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇವತ್ತು ನನ್ನನ್ನು ಸ್ವಾಗತ ಮಾಡಲು 16 ಸಾವಿರ ಜನ ಯುವಕರು ಬೈಕ್ ರ್ಯಾಲಿ ಮೂಲಕ ಬಂದು ನನಗೆ ಸನ್ಮಾನ ಮತ್ತು ಗೌರವ ಎರಡನ್ನು ಕೊಟ್ಟಿದ್ದಾರೆ ಇದು ನನ್ನ ಗೆಲುವಿಗೆ ಸಾಕ್ಷಿ ಎಂದರಲ್ಲದೆ ಬಿಜೆಪಿ ಹೆಚ್ಚು ಅತಿ ಹೆಚ್ಚು ಮತಗಳಿಂದ ಅಂತರದಿಂದ ಗೆದ್ದು ಬರುತ್ತೆ ಎಂದರು.
ಕಾಂಗ್ರೇಸನವರಿಗೆ ಬಿಜೆಪಿ ವಿರುದ್ದ ಮೋದಿ ಬಗ್ಗೆ ಮಾತಾನಡಲಿಕೆ ಯಾವುದೇ ವಿಷಯ ಇಲ್ಲಾ ಆದ್ದರಿಂದ ನಾನು
ಹೊರಗಿನವನು,ಒಳಗಿನವನು ಅಂತಾ ಹೇಳತ್ತಾರೆ ಆದರೆ ನಾನು ಬೆಳಗಾವಿದವನೆ ಬೆಳಗಾವಿಯು ನನ್ನ ಕರ್ಮಭೂಮಿ, ಹತ್ತು ವರ್ಷ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ ಎಂದರಲ್ಲದೆ ಜಿಲ್ಲಾ ಉಸ್ತುವಾರಿ ಸಚಿವನಾಗಿಯೂ ಕೂಡಾ ಕೆಲಸ ಮಾಡಿದ್ದೇನೆ ಎಂದರು.
ಇಲ್ಲಿನ ಸಮಸ್ಯೆ ಕುರಿತು ಚರ್ಚಿಸಲು ಅನೂಕೂಲವಾಗುವ ನಿಟ್ಟಿನಲ್ಲಿ ಸುವರ್ಣಸೌಧವನ್ನ ಕಟ್ಟುವ ಕೆಲಸದಲ್ಲಿ ಅಡಿಪಾಯ ಹಾಕಿ ಉದ್ಘಾಟನೆ ಮಾಡುವ ಕೆಲಸ ಮಾಡಿದ್ದೇನೆ ಎಂದರು.