ಗುಂಡಿಗಳನ್ನು ಮುಚ್ಚಿ ಜಿಲ್ಲಾಡಳಿತದ ಗಮನ ಸೆಳೆದ ಬೆಳಗಾವಿ ಪತ್ರಕರ್ತರ ಸಂಘ

  • 14 Jan 2024 , 11:51 PM
  • Belagavi
  • 174

ಬೆಳಗಾವಿ: ಬೆಳಗಾವಿಸ್ಮಾರ್ಟ್‌ಸಿಟಿ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಬೆಳಗಾವಿ, ದೀಪದ ಕೆಳಗೆ ಕತ್ತಲೆ ಎಂಬಂತೆ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ದೊಡ್ಡ ದೊಡ್ಡ ತಗ್ಗು-ಗುಂಡಿಗಳು ಬಿದ್ದು ಅನಾಹುತಕ್ಕೆ ಅಹ್ವಾನ ನೀಡುತ್ತಿದ್ದರೂ ಪ್ರತಿನಿತ್ಯ ಅದೇ ಮಾರ್ಗದಲ್ಲಿ ಸಂಚರಿಸುವ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ. ಹಿನ್ನೆಲೆಯಲ್ಲಿ ಬೆಳಗಾವಿ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪತ್ರಕರ್ತರು ಗುಂಡಿಗಳನ್ನು ಮುಚ್ಚಿ ಶ್ರಮದಾನ ಮಾಡುವುದರ ಜತೆಗೆ ಜಿಲ್ಲಾಡಳಿತದ ಗಮನ ಸೆಳೆದರು.

ಒಂದು ಕಡೆಗೆ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಉನ್ನತ ಗರಿಮೆ ಪಡೆದುಕೊಂಡಿದ್ದೇವೆ ಎಂದು ಬಾಯಿ ಬಡೆದುಕೊಳ್ಳುತ್ತಿರುವ ಅಧಿಕಾರಿಗಳ ಮುಖವಾಡ ಕಳಿಚಿದೆ. ಹಲವಾರ ತಿಂಗಳುಗಳಿಂದ ದೊಡ್ಡ, ದೊಡ್ಡ ಗುಂಡಿಗಳು ಬಿದ್ದು, ಮಳೆ ನೀರು ಸಂಗ್ರಹವಾಗಿ ಅಕ್ಷರಶಃ ಭಾವಿಯಂತೆ ಬಾಸವಾಗುವುದರ ಜತೆಗೆ ಅನಾಹುತಕ್ಕೆ ಆಹ್ವಾನ ನೀಡುತ್ತಿತ್ತು. ಅಲ್ಲದೇ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆದ ನಿದರ್ಶನಗಳಿವೆ. ದುರಂತವೆಂದರೆ ಇದೇ ರಸ್ತೆಯಲ್ಲಿ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು, ಜಿಲ್ಲಾ ಪಂಚಾಯತಿ ಸಿಇಒ, ಉಪಕಾರ್ಯದರ್ಶಿಗಳು, ಉಪವಿಭಾಗಾಧಿಕಾರಿ, ತಹಸೀಲ್ದಾರ, ಗ್ರಾಮೀಣ ಎಸಿಪಿ, ಲೋಕಾಯುಕ್ತ ಕಚೇರಿ, ತಾಪಂ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿನಿತ್ಯ ಸಂಚರಿಸುತ್ತಿದ್ದರೂ ಗುಂಡಿಗಳನ್ನು ಮುಚ್ಚಿವ ಕ್ರಮಕ್ಕೆ ಮುಂದಾಗದಿರುವುದರು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದ್ದು, ಪತ್ರಕರ್ತರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಹಿರಿಯ ಪತ್ರಕರ್ತ ವಿಲಾಸ್ ಜೋಶಿ ಮಾತನಾಡಿ, ಇಲ್ಲಿನ ರಸ್ತೆ ಕುರಿತು ಜಿಲ್ಲಾಡಳಿತದ ಗಮನ ಸೆಳೆಯುವ ಪ್ರಯತ್ನವನ್ನು ಎಲ್ಲ ಮಾಧ್ಯಮಗಳು ಮಾಡಿದ್ದೇವು. ಆದರೆ ಇದಕ್ಕೆ ಜಿಲ್ಲಾಡಳಿತ ಕಣ್ತೆರೆಯುವ ಕೆಲಸ ಮಾಡಿರಲಿಲ್ಲ. ಹೀಗಾಗಿ ಸಾಂಕೇತಿಕವಾಗಿ ನಾವೇ ಕಡಿ ತಂದು ಗುಂಡಿ ಮುಚ್ಚುತ್ತಿದ್ದೇವೆ. ಇನ್ನುಮುಂದಾದರೂ ಸರ್ಕಾರ, ಡಿಸಿ, ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತುಕೊಂಡು ಇಲ್ಲಿನ ಅವ್ಯವಸ್ಥೆ ಸರಿಪಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಹಿರಿಯ ಪತ್ರಕರ್ತ ಕೇಶವ ಆದಿ ಮಾತನಾಡಿ, ನಾವು ಯಾವುದೇ ಅಧಿಕಾರಿಗಳು, ಇಲಾಖೆ ವಿರುದ್ಧ ನಮ್ಮ ಕಾರ್ಯ ಅಲ್ಲ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತಿದ್ದೇವೆ. ಬೆಳಗಾವಿ ಸ್ಮಾರ್ಟಸಿಟಿ ಎಂದು ಹೇಳುತ್ತಾರೆ, ಆದರೆ ಎಲ್ಲಿ ಸ್ಮಾರ್ಟಸಿಟಿ ಇದೆ ಎನ್ನುವುದನ್ನು ಹುಡುಕಬೇಕಿದೆ. ಪ್ರತಿ ನಿತ್ಯ ಈ ರಸ್ತೆಯಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓಗಳು ಹಾಗೂ ಹಿರಿಯ ಅಧಿಕಾರಿಗಳು ಓಡಾಡುತ್ತಾರೆ. ಆದರೆ ಯಾರೂ ಇದನ್ನು ಗಮನಿಸಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಕರ್ತೆ ಕೀರ್ತಿಶೇಖರ ಕಾಸರಗೂಡು ಮಾತನಾಡಿ, ಬೆಳಗಾವಿ ಸ್ಮಾರ್ಟ ಸಿಟಿಯಾಗುತ್ತಿದೆ. ಆದರೆ ಜಿಲ್ಲಾಡಳಿತ ಆವರಣದಲ್ಲಿರುವ ರಸ್ತೆಗಳು ಮಾತ್ರ ಅಧೋಗತಿಗೆ ಬಂದು ನಿಂತಿವೆ. ಇಲ್ಲಿ ಗುಂಡಿಗಳಲ್ಲಿ ಬಿದ್ದು ಅದೇಷ್ಟೊ ವಾಹನ ಸವಾರರು ಗಾಯ ಮಾಡಿಕೊಂಡಿರುವ ಉದಾಹರಣೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಬೆಳಗಾವಿ ಪತ್ರಕರ್ತ ಸಂಘದ ಪದಾಧಿಕಾರಿಗಳು ರಸ್ತೆಯ ಗುಂಡಿಗಳನ್ನು ಮುಚ್ಚಿ ಜಿಲ್ಲಾಡಳಿತದ ಕಣ್ಣು ತೆರೆಸುವ ಪ್ರಯತ್ನ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ನೌಶಾದ ಬಿಜಾಪುರ, ಜಗದೀಶ ವಿರಕ್ತಮಠ, ಸುನೀತಾ ದೇಸಾಯಿ, ರಾಜಶೇಖರಯ್ಯ ಹಿರೇಮಠ, ಸುನೀಲ ಪಾಟೀಲ, ಸುರೇಶ ನೇರ್ಲಿ, ರವಿ ಗೋಸಾವಿ, ಶಿವಾನಂದ ಕಲ್ಲೂರ, ಶಿವರಾಜ, ಹೀರಾಮನಿ ಕಂಗ್ರಾಳ್ಕರ, ಅಂಜರ ಅಥಣಿಕರ, ಗೋಪಾಲ ಖಟವಾಕರ, ವಿಶ್ವಾಪ್ರತಾಪ ಪಾಟೀಲ, ಲಕ್ಷ್ಮಣ, ಗಜು‌ ಮುಚ್ವಂಡಿಕರ, ಮಹಾದೇವ ಪವಾರ ಸೇರಿದಂತೆ ಇನ್ನಿತರರು ಇದ್ದರು.

Read All News