ಅದ್ದೂರಿ ಗಣೇಶ ವಿಸರ್ಜನಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಯೊಂದಿಗೆ ಸಜ್ಜಾದ ಬೆಳಗಾವಿ ಪೊಲೀಸರು

  • Krishna Shinde
  • 15 Jan 2024 , 12:58 AM
  • Belagavi
  • 183

ಬೆಳಗಾವಿ :ನಗರದಲ್ಲಿ 2023 ನೇ ಸಾಲಿನ ಗಣೇಶ ಉತ್ಸವದ ಕೊನೆಯ ದಿನದ ಮೆರವಣಿಗೆ ಹಾಗೂ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮವು ದಿನಾಂಕ. 28/09/2023 ರಂದು ಮದ್ಯಾಹ್ನ 14.00 ಗಂಟೆಯಿಂದ ಪ್ರಾರಂಭವಾಗಲಿದ್ದು, ಈ ವರ್ಷ ಬೆಳಗಾವಿ ನಗರದಲ್ಲಿ ಒಟ್ಟು 937 ಸಾರ್ವಜನಿಕ ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳಲಿದ್ದು, ಸದರಿ ಕಾಲಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು ಎಸ್‌ಪಿ ದರ್ಜೆಯ 05, ಡಿಎಸ್‌ಪಿ-20, ಪಿಐ-72, ಪಿಎಸ್‌ಐ, 106 ಎಎಸ್‌ಐ-210, ಎಚ್‌ಸಿ & ಪಿಸಿ 2048 ಹೋಮ್ ಗಾರ್ಡ 405 ಹಾಗೂ ಕೆಎಸ್‌ಆರ್‌ಪಿ ಪ್ರಹಾರ ದಳಗಳು -10 ಹೀಗೆ ಬಂದೋಬಸ್ತ ಕರ್ತವ್ಯಕ್ಕೆ ಆಗಮಿಸಿದ್ದು, ಅವರೊಂದಿಗೆ ಸ್ಥಳೀಯ 03 ಎಸ್‌ಪಿ ದರ್ಜೆಯ, ಡಿಎಸ್‌ಪಿ-05, ಪಿಐ-21, ಪಿಎಸ್‌ಐ, 36 ಎಎಸ್‌ಐ-90ಎಚ್‌ಸಿ & ಪಿಸಿ 731 ಸಿಎಆರ್ ಪ್ರಹಾರ ದಳಗಳು -08 ಈ ಪ್ರಕಾರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನಿಯೋಜಿಸಿ ಮೆರವಣಿಗೆ ಹಾಗೂ ನಗರದ ಸೂಕ್ಷ್ಮ ಸ್ಥಳಗಳಲ್ಲಿ ಬಂದೋಬಸ್ತ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಇದಕ್ಕೆ ಪೂರಕವಾಗಿ ನಗರದಲ್ಲಿ ಮೆರವಣಿಗೆ ಮಾರ್ಗದಲ್ಲಿ ಹಾಗೂ ನಗರದ ಅತೀ ಸೂಕ್ಷ್ಮ ಸ್ಥಳಗಳಲ್ಲಿ ಒಟ್ಟು 487 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಮೆರವಣಿಗೆ ಮಾರ್ಗ ಮತ್ತು ಅತೀ ಸೂಕ್ಷ್ಮ ಸ್ಥಳಗಳಲ್ಲಿ ನಿಗಾವಹಿಸಿಲು 08 ಡ್ರೋನ ಕ್ಯಮೆರಾಗಳನ್ನು ಉಪಯೊಗಿಸಲಾಗುತ್ತಿದೆ. 

ತಪಾಸನೆಗಾಗಿ 03  ವಿಧ್ವಂಸಕ  ಕೃತ್ಯ ತಪಾಸಣೆ ತಂಡ (ಎಎಸ್‌ಸಿ)ಗಳನ್ನು ನಿಯೋಜಿಸಿ ಬೆಳಗಾವಿ ನಗರದ ಗಣೇಶ ವಿಸರ್ಜನಾ ಕಾಲಕ್ಕೆ ಯಾವುದೇ ಅಹಿತಕರ ಘಟನೆಗಳು ಹಾಗೂ ಕಾನೂನು ಸುವ್ಯಸ್ಥೆಗೆ ದಕ್ಕೆಯಾಗದಂತೆ ಮುಂಜಾಗೃತಾ ಕ್ರಮ ಹಾಗೂ ಪೂರ್ವ ತಯಾರಿ ಮಾಡಿಕೊಂಡು ಎಲ್ಲ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. 

ಮೆರವಣಿಗೆ ಕಾಲಕ್ಕೆ ಯಾವುದೇ ವ್ಯಕ್ತಿ ಕಾನೂನು ಸುವ್ಯವಸ್ಥೆಗೆ ದಕ್ಕೆ ತರಲು ಪ್ರಯತ್ನಿಸಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಇದರೊಂದಿಗೆ ಸದರಿ ದಿನ ಸಾರ್ವಜನಿಕರಿಗೆ ಸಂಚಾರ ಸುವ್ಯವಸ್ಥೆಗಾಗಿ ಆಯ್ದ ಸ್ಥಳಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.

Read All News