ಬೆಳಗಾವಿ : ಬೈಲಹೊಂಗಲ ಶಹರದಲ್ಲಿ ಮತ್ತು ನೇಸರಗಿಯಲ್ಲಿ ಜರುಗಿದ ಸರಣಿ ಮನೆ ಕಳತನ ಪ್ರಕರಣಗಳ ಆರೋಪಿ ಮತ್ತು ಕಳವು ಮಾಲು ಪತ್ತೆ ಕುರಿತು ಡಾ.ಭೀಮಾಶಂಕರ ಎಸ್. ಗುಳೇದ ಐಪಿಎಸ್, ಜಿಲ್ಲಾ ಪೊಲೀಸ ಅಧೀಕ್ಷಕರು, ಬೆಳಗಾವಿ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಎಂ. ವೇಣುಗೋಪಾಲ ಹಾಗೂ ಆರ್ ಬಿ ಬಸರಗಿ ಮತ್ತು ರವಿ ಡಿ ನಾಯ್ಕ ಡಿಎಸ್‌ಪಿ ಬೈಲಹೊಂಗಲರವರ ಮಾರ್ಗದರ್ಶನದಲ್ಲಿ ಪಿ. ವಿ. ಸಾಲಿಮಠ ಪಿಐ ಬೈಲಹೊಂಗಲ ರವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಈ ತಂಡವು ವೈಜ್ಞಾನಿಕ ತನಿಖಾ ಸಾಧನಗಳನ್ನು ಬಳಸಿಕೊಂಡು ಮಹಾರಾಷ್ಟ್ರ ರಾಜ್ಯದಲ್ಲಿ ಇಬ್ಬರು ಕೆಳಕಂಡ ಆರೋಪಿತರನ್ನು ದಸ್ತಗೀರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
1] ದೀಪಕ ಸುದೇಶ ಪವಾರ್ ವಯಾ: 22 ವರ್ಷ
2) ರಾಹುಲ ಗಂಗಾಧರ ಜಾಧವ ವಯಾ 21 ವರ್ಷ ಇಬ್ಬರು ಕರತ ಮಂಸ್ಕೂಲ ಜೋಪಡಪಟ್ಟಿ: ಪೋಸ್ಟ ಕುಂಬಾಹಾರ ಪಿಂಪಲ್‌ಗಾಂವ ತಾ ಗನ್ ಸಾಂಗಿ ಜಿ, ಜಾಲನಾ ಮಹಾರಾಷ್ಟ್ರ ರಾಜ್ಯದವರಾಗಿದ್ದಾರೆ.
ಈ ಆರೋಪಿತರನ್ನು ಕುಲಂಕುಷವಾಗಿ ತನಿಖೆಗೆ ಒಳಪಡಿಸಿ ಈ ಪ್ರಕರಣದಲ್ಲಿ ದಸ್ತಗೀರ ಮಾಡಿ ಅವರಿಂದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ನೇಸರಗಿ, ಹುಕ್ಕೇರಿ ಮತ್ತು ಸಂಕೇಶ್ವರ ಠಾಣಾ ವ್ಯಾಪ್ತಿಯಲ್ಲಿ 10 ಕಳ್ಳತನದ ಪ್ರಕರಣಗಳನ್ನು ಪತ್ತೆ ಮಾಡಿ ಅವರಿಂದ 15 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಮತ್ತು ಇನ್ನೂ ಒಬ್ಬ ಸಹ ಆರೋಪಿತ ಪರಾರಿ ಇದ್ದು ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಪತ್ತೆ ಬಗ್ಗೆ ಪಿ ವಿ ಸಾಲಿಮಠ ಸಿಐ ಬೈಲಹೊಂಗಲ ರವರ ನೇತೃತ್ವದಲ್ಲಿ ಮಲ್ಲಿಕಾರ್ಜುನ ಬಿರಾದಾರ ಪಿಎಸ್‌ಐ ನೇಸರಗಿ ಮತ್ತು ಗುರುರಾಜ ಕಲಬುರ್ಗಿ ಪಿಎಸ್‌ಐ ಬೈಲಹೊಂಗಲ ಪಿಎಸ್ ಹಾಗೂ ಸಿಬ್ಬಂದಿ ಜನರಾದ, ಸಿ.ಎಚ್.ಸಿ ವಿಠಲ ಎಮ್ ದೊಡ್ಡಹೊನ್ನಪ್ಪನವರ, ಸಿ.ಎಚ್.ಸಿ ಶಂಕರ ಯು ಮನಸಿನಕಾಯಿ, ಸಿ.ಎಚ್.ಸಿ. ವಿ.ಎಸ್ ಯರಗಟ್ಟಿಮಠ, ಸಿ.ಪಿ.ಸಿ ಯು ಎಚ್ ಪೂಜೇರಿ, ಸಿ.ಪಿ.ಸಿ ಚೇತನ ಬುದ್ದಿ, ಸಿ.ಪಿ.ಸಿ ಜೆ ಆರ್ ಮಳಗಲಿ, ಸಿ.ಪಿ.ಸಿ ಎ ಕೆ ಡೊಂಬರ, ಸಿ.ಪಿ.ಸಿ ಮುತ್ತು ಮುರಗೋಡ, ಸಿ.ಪಿ.ಸಿ ಎಸ್. ಎಮ್ ಅಂಗಡಿ, ಹಾಗೂ ಬೆಳಗಾವಿ ಟೆಕ್ನಿಕಲ್ ವಿಭಾಗದ ಸಿಪಿಸಿ ವಿನೋದ ಠಕ್ಕನವರ & ಸಿಪಿಸಿ ಸಚೀನ ಪಾಟೀಲ ಇವರೆಲ್ಲರೂ ಆರೋಪಿತನ ಪತ್ತೆ ಕಾರಾಚರಣೆಯಲ್ಲಿ ಶ್ರಮಿಸಿರುತ್ತಾರೆ. ಈ ಬಗ್ಗೆ ಮಾನ್ಯ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.