ಬೈಲಹೊಂಗಲ : ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಉತ್ತರ ಕರ್ನಾಟಕದ ಮುಕುಟ ಬೆಳಗಾವಿ ಜಿಲ್ಲೆಯ ಹೆಸರು ಪ್ರಸ್ತಾಪ ಮಾಡಿ, ಅದರಿಂದ ವೈಯಕ್ತಿಕ ಲಾಭ ಪಡೆದುಕೊಂಡು, ಈ ಭಾಗದ ಜನರಿಗೆ ಅನುಕೂಲತೆಗಳನ್ನು ಕಲ್ಪಿಸದೆ ಇರುವದು ದೌರ್ಭಾಗ್ಯ.
ಭವ್ಯ ಕರ್ನಾಟಕದ ಎರಡನೇಯ ರಾಜಧಾನಿ ಎನಿಸಿಕೊಂಡಿರುವ ಬೆಳಗಾವಿಗೆ ಸಕಲ ಸೌಕರ್ಯ ಕೊಟ್ಟು, ಉತ್ತುಂಗಕ್ಕೆ ಏರಿಸಬೇಕಾದ ಸರ್ಕಾರಗಳ ನಿರ್ಲಕ್ಷ್ಯತನದಿಂದ ಉದ್ಯೋಗ, ಶೈಕ್ಷಣಿಕವಾಗಿ ಹಿಂದೆ ಉಳಿಯಿತ್ತಾ ಬಂದಿದೆ.
ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿ ಮಹತ್ತರ ಸಾಧನೆ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುವ ಬದಲು ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ, ಪದವಿ ಪಡೆದವರಿಗೆ ಭವಿಷ್ಯದಲ್ಲಿ ಉದ್ಯೋಗ ಅವಕಾಶಗಳ ಪೂರೈಸಬೇಕಾಗಿರುವದು ಸರ್ಕಾರದ ಜವಾಬ್ದಾರಿ.
ಕೇಂದ್ರದಿಂದ ಬರುವ ಅವಕಾಶಗಳನ್ನು ನೆರೆಯ ಜಿಲ್ಲೆಗೆ ಸಮರ್ಪಣೆ ಮಾಡಿ ಕುಂತರೆ ಹೇಗೆ.
ಬೆಳಗಾವಿ ಜಿಲ್ಲೆಯ ಬಗ್ಗೆ ಗಮನ ಹರಿಸಿ, ಇಲ್ಲಿಂದ ತಾಂತ್ರಿಕ ಅಭಿಯಾಂತ್ರಿಕ ವಿದ್ಯಾರ್ಥಿಗಳು ಪಾಸ ಆಗಿ ಉದ್ಯೋಗ ಅರಸಿ ಬೇರೆ ಜಿಲ್ಲೆ, ರಾಜ್ಯಕ್ಕೆ ಹುಡುಕಾಟ ನಡೆಸಬೇಕಾದ ಅನಿವಾರ್ಯತೆ ಇದೆ.
ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮುಂದುವರೆದು ಉತ್ತರ ಕರ್ನಾಟಕ ಭಾಗದ ಶ್ರೇಯೋಭಿವೃದ್ದಿಗೆ ಶ್ರಮಿಸಲೆಂದು ಸಾಕಷ್ಟು ಅವಕಾಶ ವಂಚಿತರಿಂದ ಮನವಿ.
ವರದಿಗಾರ : ರವಿಕಿರಣ್ ಯಾತಗೇರಿ