ಇಮ್ಮಡಿ ಪುಲಕೇಶಿ ಪ್ರತಿಮೆ ಸ್ಥಾಪಿಸುವಂತೆ ಭ್ರಹತ್ ಪ್ರತಿಭಟನೆಗೆ ಕರೆ ಕೊಟ್ಟ ಭೀಮಾ ಶಂಕರ್ ಪಾಟೀಲ್

  • Krishna Shinde
  • 15 Jan 2024 , 3:49 AM
  • Bagalkot
  • 667

ಬಾಗಲಕೋಟೆ : ಚಾಲುಕ್ಯ ಸಾಮ್ರಾಜ್ಯದ ವೀರ ಭೂಮಿ ಬಾಗಲಕೋಟೆ ನಗರದಲ್ಲಿ ಚಾಲುಕ್ಯ ಸಾಮ್ರಾಟ, ದಕ್ಷೀಣಾಪಥೇಶ್ವರ, ಪರಮ ವೀರ ಇಮ್ಮಡಿ ಪುಲಕೇಶಿಯ ಪ್ರತಿಮೆ ಸ್ಥಾಪಿಸುವಂತೆ ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆ ಬಾಗಲಕೋಟೆ ಜಿಲ್ಲಾ ಘಟಕವು ಅಗಸ್ಟ್  21 ರಂದು ಬೆಳಿಗ್ಗೆ 11 30ಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಜಿಲ್ಲಾಧ್ಯಕ್ಷ ಆತ್ಮರಾಮ ನೀಲಾನಾಯಕ್ ಅವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಬಾಗಲಕೋಟೆಯ ನಾಡ ಬಂಧುಗಳು ಈ ಹೋರಾಟದಲ್ಲಿ ಭಾಗಿಯಾಗಿ ಬೆಂಬಲಿಸುವಂತೆ ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷ  ಭೀಮಾ ಶಂಕರ್ ಪಾಟೀಲ್ ಮನವಿ ಮಾಡಿಕೊಂಡಿದ್ದಾರೆ.

Read All News