ದೇಶದ ಜನರನ್ನು ಒಗ್ಗೂಡಿಸಲು ಬೃಹತ್ ಭಾರತ್ ಜೋಡೊ ಪಾದಯಾತ್ರೆ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ

  • 12 Jan 2024 , 4:42 AM
  • Belagavi
  • 113

ಬೆಳಗಾವಿ: ದೇಶದಲ್ಲಿ ಜಾತಿ, ಧರ್ಮಗಳ ವಿಷಬೀಜವನ್ನು ಕಿತ್ತೊಗೆದು ಸಮನ್ವಯತೆ ಹುಟ್ಟುಹಾಕುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ 'ಭಾರತ್ ಜೋಡೊ ಬೃಹತ್ ' ಪಾದಯಾತ್ರೆ ಹಮ್ಮಿಕೊಂಡಿದ್ದು ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರ ಜತೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ದೇಶದಲ್ಲಿ ಇದು ನಿನ್ನೆಯಿಂದಲೇ ಆರಂಭವಾಗಿದೆ ಎಂದು ತಿಳಿಸಿದರು.

ನಮ್ಮದು ಶಾಂತಿಪ್ರಿಯ ದೇಶ. ಇಲ್ಲಿ ವಿವಿಧ ಭಾಷೆಗಳು, ಜನಾಂಗಗಳು, ಧರ್ಮಗಳ ಜನರಿದ್ದರೂ ನಾವು ಒಂದೇ ಎಂದು ಸದಾರುವ ದೇಶವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಜಾತಿ, ಧರ್ಮಗಳ ಸಂಘರ್ಷ, ಒಡೆದಾಳುವ ನೀತಿ ಇತ್ಯಾದಿಗಳನ್ನು ಕಿತ್ತೆಸೆದು ನಾವು ಭಾರತೀಯರೆಲ್ಲ ಒಂದೇ ಎನ್ನುವ ಭಾವನೆ ಹುಟ್ಟಿಸುವುದು ಭಾರತ್ ಜೋಡೋ ಯಾತ್ರೆಯ ಮುಖ್ಯ ಉದ್ದೇಶ ಎಂದು ಹೇಳಿದರು.

ಇಲ್ಲಿನ ನಾಲ್ವರು ಶಾಸಕರಿಗೆ ಇದರ ಜವಾಬ್ದಾರಿ ವಹಿಸಿದ್ದು ತಾವು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಇದರ ಉಸ್ತುವಾರಿ ನೋಡಿಕೊಳ್ಳುತ್ತಿರುವುದಾಗಿ ತಿಳಿಸಿದ ಲಕ್ಷ್ಮೀ ಹೆಬ್ಬಾಳಕರ, ಬೆಳಗಾವಿ ಹಾಗೂ ಯಮಕನಮರಡಿ ಕ್ಷೇತ್ರದಿಂದ ಯುವಕರು, ಮಹಿಳೆಯರು ಸೇರಿದಂತೆ ತಲಾ 5 ಸಾವಿರ ಜನ ಮೊಳಕಾಲ್ಮೂರಿನಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವುದಾಗಿ ಮಾಹಿತಿ ನೀಡಿದರು.

ಸ್ವತಃ ಮಹಾತ್ಮಾ ಗಾಂಧೀಜಿಯವರು ಸಹ ಬ್ರಿಟಿಷರಿಗೆ ವೈರಿ ಎಂದು ಪರಿಗಣಿಸುತ್ತಿರಲಿಲ್ಲ. ಅಂಥವರ ಉದಾತ್ತ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಈ ನಿಟ್ಟಿನಲ್ಲಿ ಎಲ್ಲರನ್ನೂ ಒಟ್ಟುಗೂಡಿಸುವಲ್ಲಿ ಭಾರತ ಜೊಡೊ ಸಹಾಯಕಾರಿಯಾಗಲಿದೆ ಎಂದು ಅವರು ತಿಳಿಸಿದರು.

Read All News