ದಿ.25ರಂದು ಬೃಹತ್ ರಕ್ತದಾನ ಶಿಬಿರ

  • 15 Jan 2024 , 12:09 AM
  • Belagavi
  • 161

ಅಥಣಿ : ಗಣರಾಜ್ಯೋತ್ಸವ ಹಾಗೂ ರಾಷ್ಟ್ರೀಯ ಮತದಾರ ದಿನಾಚರಣೆಯ ಅಂಗವಾಗಿ ಬುಧವಾರ ದಿನಾಂಕ 25 ರಂದು ಮುಂಜಾನೆ 10 ಗಂಟೆಗೆ  ಡಾ. ಆರ್. ಎಚ್  ಕುಲಕರ್ಣಿ ಸಭಾಭವನದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ  ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಾಲೂಕ ಆರೋಗ್ಯ ಅಧಿಕಾರಿ  ಡಾ.ಬಸಗೌಡ  ಕಾಗೆ ಹೇಳಿದರು.

ಅವರು  ಅಥಣಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ, ಅಲ್ಲದೇ ಉತ್ತಮ ಆರೋಗ್ಯ ಹೊಂದಬಹುದು. ದೇಹದಲ್ಲಿನ ಕೊಬ್ಬಿನಂಶವನ್ನು ಕಡಿಮೆ ಮಾಡಲು ಮತ್ತು ಹೃದಯಘಾತವನ್ನು ಕಡಿಮೆ ಮಾಡುತ್ತದೆ. ಬಿಪಿ ಮತ್ತು ಶುಗರ್ ನಂತಹ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ರಕ್ತದಾನ ಸಹಕಾರಿಯಾಗಿದೆ. 

ಇತ್ತೀಚಿನ ದಿನಗಳಲ್ಲಿ ಬ್ಲಡ್ ಬ್ಯಾಂಕಗಳಲ್ಲಿ ರಕ್ತದ ಕೊರತೆಯಾಗುತ್ತಿದ್ದು, ಅಪಘಾತ ಮತ್ತು ತುರ್ತು ಸಂದರ್ಭದಲ್ಲಿ ಜನರು ಮಾಡಿದ ರಕ್ತದಾನ  ಜೀವ ಉಳಿಸಲು ಸಹಕಾರಿಯಾಗುತ್ತದೆ. 

18ರಿಂದ 60 ವರ್ಷದ ಒಳಗಿನ ಆರೋಗ್ಯವಂತ  ಜನರು ರಕ್ತದಾನ ಮಾಡುವ ಮೂಲಕ  ಈ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.

Read All News