ಅಥಣಿ : ಜತ್ ರಸ್ತೆಯಲ್ಲಿ ಹೊಸಟ್ಟಿ ಕ್ರಾಸ್ ನಿಂದ ಬರುತ್ತಿದ್ದ ಟಿಪ್ಪರ್ ಹಾಗೂ ಬೈಕ್ ಗೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಯುವಕ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ 9:30 ಸುಮಾರಿಗೆ ಜರುಗಿದೆ. ಟಿಪ್ಪರ್ ಯುವಕನ ತಲೆಯ ಮೇಲೆ ಹರಿದಿದ್ದು ತಲೆ ಸಂಪೂರ್ಣ ಜಜ್ಜಿ ಹೋಗಿ ರಸ್ತೆ ತುಂಬೆಲ್ಲ ರಕ್ತ ಚೆಲ್ಲಿದೆ. ಮೃತ ಯುವಕನನ್ನು ನಾಗನೂರು ಪಿಕೆ ಗ್ರಾಮದ ದರ್ಶನ್ ಶಿವಾನಂದ ಕಾಂಬಳೆ ಎಂದು ಗುರುತಿಸಲಾ ಗಿದೆ. ಈತ ನಾಗನೂರು ಪಿಕೆ ಗ್ರಾಮದಿಂದ ಬೈಕ್ ಮೇಲೆ ಕೆಲಸಕ್ಕಾಗಿ ತೆರಳುತ್ತಿದ್ದ ಎಂದು ತಿಳಿದುಬಂದಿದೆ. ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಮೃತನ ಸಂಬಂಧಿಕರ ರೋಧನೆ ಮುಗಿಲು ಮುಟ್ಟಿತ್ತು.