ಡಂಬಲ್ ಇಂಜಿನ್ ಸರ್ಕಾರ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕರು , ಪ್ರಜಾ ಧ್ವನಿ ಸಮಾವೇಶದಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಕೈ ನಾಯಕರು
ಬೆಳಗಾವಿ: 600 ಭರವಸೆಗಳಲ್ಲಿ 60 ಭರವಸೆಗಳನ್ನು ಈಡೇರಿಸದ ಬಿಜೆಪಿ ವಚನ ಭ್ರಷ್ಟ ಸರ್ಕಾರದ ಕರ್ಮಕಾಂಡವನ್ನ ಪ್ರಜಾಧ್ವನಿ ಮೂಲಕ ರಾಜ್ಯದ ಜನರ ಮಂದೆ ಈಡುತ್ತೆವೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಇಂದು ಆರಂಭಿಸಿದ ಪ್ರಜಾಧ್ವನಿ ಯಾತ್ರೆ ನಿಮಿತ್ತ ಬೆಳಗಾವಿಯ ಆಟೋನಗರದ ಅಂಜುಮನ್ ಸಂಸ್ಥೆಯ ಮೈದಾನದಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ 7 ಕೋಟಿ ಜನತೆಗೆ ಧ್ವನಿಇದಾಗಿದ್ದು, ನಿಮ್ಮ ಆಸೆ, ನಿರೀಕ್ಷೆಯಂತೆ ಜನಪರ ಆಡಳಿತವನ್ನು ಕಾಂಗ್ರೆಸ್ ನೀಡಲು ಮುಂದಾಗಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮುಖಾಂತರ ಅಧಿಕಾರಕ್ಕೆ ತರಬೇಕೆಂದ ಅವರು, ಬಿಜೆಪಿ ಸುಳ್ಳು ತಯಾರಿಸುವ ಕಾರ್ಖಾನೆಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೇ ರೈತರ ಸಾಲ ಮನ್ನಾ ಮಾಡುತ್ತೆವೆ ಎಂದು ಭರವಸೆ ನೀಡಿತ್ತು, ಈಗ್ ಅಧಿಕಾರಕ್ಕೆ ಬಂದ ಬೊಮ್ಮಾಯಿ ಸರ್ಕಾರ ರೈತರ ನಯಾಪೈಸೆ ಸಾಲ ಮನ್ನಾ ಮಾಡಿಲ್ಲ ಎಂದು ಕಿಡಿ ಕಾರಿದರು.
ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ ಭರವಸೆ ಸುಳ್ಳಾಗಿದೆ. ಬೊಮ್ಮಾಯಿಯವರೇ ಒಂದೇ ವೇದಿಕೆಗೆ ಬನ್ನಿ, ರಾಜ್ಯದ ಜನತೆ ಮುಂದೆ ನಾವೇನೂ ಮಾಡಿದ್ದೆವೆ, ನೀವೆನೂ ಮಾಡಿದ್ದಿರಿ ಎಂದು ಈ ರಾಜ್ಯದ ಜನವೇ ನೋಡಲಿ ಎಂದು ಸವಾಲೆಸೆದರು.
ರಾಜ್ಯದ ನೀರಾವರಿ ಯೋಜನೆಗೆ 1 ಲಕ್ಷ 50 ಸಾವಿರ ಕೋಟಿ ರೂ. ಬಿಡುಗಡೆ ಮಾಡುತ್ತೇವೆ ಎಂದಿದ್ದರು. ಖರ್ಚು ಮಾಡಿದ್ದು ಕೇವಲ 45 ಸಾವಿರ ಕೋಟಿ. ದೊಡ್ಡ ದೊಡ್ಡ ಭರವಸೆ ಕೊಟ್ಟು ಜನರ ಮನಸ್ಸಿನಲ್ಲಿ ಆಸೆ ಹುಟ್ಟಿಸಿ ಜನರಿಗೆ ಮೋಸ ಮಾಡಿರುವುದು ಬಿಜೆಪಿ ಎಂದು ಹರಿಹಾಯ್ದರು.
ರಾಜ್ಯದ 25 ಸಂಸದರು ಇದ್ದಾರೆ. 15ನೇ ಹಣಕಾಸು ಆಯೋಗದ ಯೋಜನೆಯ 5,495 ಕೋಟಿ ಅನುದಾನ ಕೇಳಲು ಅವರಿಗೆ ಧಮ್ ಇಲ್ಲ. ತಾಕತ್ತು ಇಲ್ಲ. ಇಂಥ ಹೇಡಿ ಸರಕಾರ ರಾಜ್ಯದಲ್ಲಿ ಮತ್ತೇ ಬರಬಾರದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ಎತ್ತಿದ್ದರೆ ಧರ್ಮ ಇದ್ದರೇ, ತಾಕತ್ತು ಇದ್ದರೆ ಎನ್ನುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಲು ರಾಜ್ಯ ಬಿಜೆಪಿ ನಾಯಕರು ಗಡ ಗಡ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ಭ್ರಷ್ಟ ಬಿಜೆಪಿಯನ್ನ ಬೇರು ಸಮೇತ ಕಿತ್ತು ಹಾಕಿ: ರಣದೀಪ್ ಸಿಂಗ್ ಸುರ್ಜೇವಾಲಾ ಗುಡುಗು
ಈಗ ರಾಜ್ಯದಲ್ಲಿರುವುದು 40 ಪರ್ಸೆಂಟ್ ಸರ್ಕಾರ. ದೇಶದಲ್ಲಿ ಅತೀ ಭ್ರಷ್ಟಚಾರ ಎಂದರೆ ಬೊಮ್ಮಾಯಿ ಸರ್ಕಾರ ಎಂದು ಬಿಜೆಪಿ ವಿರುದ್ಧ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹರಿಹಾಯ್ದರು.