ರಾಹುಲ ಗಾಂಧಿಯವರನ್ನು ಸಂಸತ್ತಿನಿಂದ ಅಮಾನತುಗೊಳಿಸಲು ಪಟ್ಟು ಹಿಡಿದ ಬಿಜೆಪಿ

  • Krishna Shinde
  • 15 Jan 2024 , 3:31 AM
  • Delhi
  • 137

ದೆಹಲಿ :ಇತ್ತೀಚೆಗೆ ಯುನೈಟೆಡ್ ಕಿಂಗ್‌ಡಮ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇಶ, ಅದರ ಪ್ರಜಾಪ್ರಭುತ್ವ ಮತ್ತು ಸಂಸತ್ತಿಗೆ ಅವಮಾನ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅಮಾನತುಗೊಳಿಸಬೇಕೇ ಎಂದು ಪರಿಶೀಲಿಸಲು ಲೋಕಸಭೆಯ ವಿಶೇಷ ಸಮಿತಿಯನ್ನು ರಚಿಸುವಂತೆ ಬಿಜೆಪಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಕೇಳಿದೆ. 

ಬಿಜೆಪಿಯು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ರಾಹುಲ ಗಾಂಧಿಯವರನ್ನು ಕೆಳಮನೆ ಸದಸ್ಯತ್ವವನ್ನು ಅಮಾನತುಗೊಳಿಸುವಂತೆ ಒತ್ತಾಯಿಸುವ ಸಂಭವವಿದೆ.
ರಾಹುಲ ಗಾಂಧಿ UKನಲ್ಲಿ ಹೇಳಿದ್ದೇನು , ಬಿಜೆಪಿ ಈ ಪರಿ ಸಿಟ್ಟೇಕೆ?ಫೆಬ್ರವರಿ 28 ರಂದು, ರಾಹುಲ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಪ್ರಜಾಪ್ರಭುತ್ವವು ಆಕ್ರಮಣದಲ್ಲಿದೆ  ಮತ್ತು ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಸಾಂಸ್ಥಿಕ ಚೌಕಟ್ಟು - ಸಂಸತ್ತು, ಮುಕ್ತ ಪತ್ರಿಕಾ, ನ್ಯಾಯಾಂಗ, ಕೇವಲ ಸಜ್ಜುಗೊಳಿಸುವ ಕಲ್ಪನೆ ಇವೆಲ್ಲವೂ ನಿರ್ಬಂಧಿತವಾಗುತ್ತಿವೆ ಎಂದು ಹೇಳಿಕೆ ನೀಡಿದ್ದು ಬಿಜೆಪಿಯ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಈ ಆರೋಪಗಳನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ವಕ್ತಾರರು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ ಮತ್ತು ರಾಹುಲ ಗಾಂಧಿ ಪರ ಬ್ಯಾಟ್ ಬಿಸಿದ್ದಾರೆ.  

ಕಾಂಗ್ರೆಸ ವಕ್ತಾರರ ಹೇಳಿಕೆಗಾಗಿ ಈ ಕೇಳಿಗಿನ ಲಿಂಕ ಒತ್ತಿ

Read All News