ಬೆಳಗಾವಿ :ಫೆಬ್ರವರಿ 3ರಿಂದ ಪ್ರಜಾಧ್ವನಿ ಯಾತ್ರೆ ಆರಂಭವಾಗಿದ್ದು ಇದು ಜನರ ಭಾವನೆ ,ಸಲಹೆ ಮತ್ತು ಇದು ಜನರ ಧ್ವನಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ರಾಜ್ಯದ ಅಭಿವೃದ್ಧಿಗೆ ಸಂಬಧಿಸಿದಂತೆ ಪ್ರಣಾಳಿಕೆ ತಯಾರಿ ಮಾಡಿ ಅಲ್ಲಿನ ಜನರ ಸಮಸ್ಸೆಗಳಿಗೆ ಸ್ಪಂದಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಜಾಧ್ವನಿ 2ತಂಡಗಳಲ್ಲಿ ಸಂಚರಿಸುತ್ತಿದೆ ಒಂದು dkc ನೇತೃತ್ವದಲ್ಲಿ ಮತ್ತೊಂದು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿದೆ ಹೇಳಿದ್ದಾರೆ.
ಪ್ರಜಾಧ್ವನಿ ಯಾತ್ರೆಯಲ್ಲಿ ಮಹಿಳೆಯರು ಮತ್ತು ಯುವಕರು ಹೆಚ್ಚಾಗಿ ಸೇರುತ್ತಿದ್ದಾರೆ ಮತ್ತು ಕಾಂಗ್ರೆಸ್ ಮತ್ತೆ ರಾಜ್ಯದ ಚುಕ್ಕಾಣಿ ಹಿಡಿಯುತ್ತದೆ ಎಂಬ ವಿಶ್ವಾಸ್ ಹೆಚ್ಚಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಸರ್ಕಾರ 9 ವರ್ಷದಿಂದ ದೇಶದಲ್ಲಿದ್ದು ಜನ ಬಿಜೆಪಿಯ ದುರಾಡಳಿತದಿಂದ ಬೇಸತ್ತಿದ್ದಾರೆ ಬಿಜೆಪಿ ಅನೈತಿಕ ಸರಕಾರ ಹೊಂದಿದೆ ಅದು ಆಪರೇಷನ್ ಕಮಲ ಮಾಡಿ ರಾಜ್ಯದ ಚುಕ್ಕಾಣಿ ಹಿಡಿದಿದೆ ಎಂದು ಹೇಳಿದ್ದಾರೆ.
ಬಿಜೆಪಿ ಭ್ರಷ್ಟಾಚಾರದಿಂದ ತುಂಬಿ ತುಳಿಕಿದೆ , ಪ್ರಧಾನಿ ಮೋದಿ ರಾಜ್ಯ ಬಿಜೆಪಿಯ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಟ್ರಾಕ್ಟರ ಸಂತೋಷ್ ಪಾಟೀಲ್ ಆತ್ಮ ಹತ್ಯೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ,mla ಮಾಡಾಳ ವಿರುಪಾಕ್ಷಪ್ಪ ಮಗನ ಭ್ರಷ್ಟಾಚಾರ ಪ್ರಸ್ತಾಪಿಸಿದ್ದಾರೆ.
ನಾನು ಆರೋಪ ಮಾಡಿದ ತಕ್ಷಣವೇ 8ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿದ್ದೆ ಆದರೆ ಈ ಸರ್ಕಾರ ಒಂದು 8ಪ್ರಕರಣಗಳನ್ನು ಕೂಡ ಒಪ್ಪಿಸಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
5ವರ್ಷ ವಿರೋಧ ಪಕ್ಷದಲ್ಲಿದ್ದರು ಧ್ವನಿ ಎತ್ತದ ಬಿಜೆಪಿ ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ನನ್ನ ಮೇಲೆ ಆರೋಪ ಮಾಡುತ್ತಿದೆ,ಬಿಜೆಪಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹಬ್ಬಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಾವು ಮಾಡಿದ ಕಾರ್ಯಕ್ರಮಗಳಿಗೆ ಬಿಜೆಪಿ ಹೆಸರು ಬಳಸುತ್ತಿದೆ ಎಂದು ಹೇಳಿದ್ದಾರೆ,14,54,000ಮನೆ ಕಟ್ಟಿಸಿದ್ದು ಬಿಜೆಪಿ ಒಂದು ಮನೆ ಕೂಡ ನೀಡಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಮನೆ ಮಂಜೂರು ಮಾಡದೇ ಸುಳ್ಳು ಹೇಳುತ್ತಿದೆ ಎಂದು ಹೇಳಿದ್ದಾರೆ,168 ಭರವಸೆಗಳನ್ನು ಕಾಂಗ್ರೆಸ್ ಇರೇಡಿಸಿದೆ ಆದ್ರೆ ಬಿಜೆಪಿ 10% ಭರವಸೆಗಳನ್ನೂ ಕೂಡ ಇರಿಡಿಸಿಲ್ಲ ಎಂದು ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರಿ ಹಣವನ್ನು ವೆಚ್ಚ ಮಾಡುತ್ತಿದೆ,ಮೋದಿ ರೋಡ್ ಶೋಗೆ ಬಿಜೆಪಿಯವರು 500 ರೂ ಕೊಡ್ತೀವಿ ಅಂತ ಹೇಳಿ ಜನ ಜಗಳ ಮಾಡಿದ್ದಾರೆ ಆದರೆ ಬಿಜೆಪಿ ವಿಡಿಯೋವನ್ನು ತಿರುಚಿ ನನ್ನ ಮೇಲೆ ಆರೋಪ ಮಾಡುತ್ತಿದೆ ಎಂದು ಸಿದ್ದು ಹೇಳಿದ್ದಾರೆ.
ಕೂಡಲೇ ಕೋಡ ಒಫ್ ಕಂಡಕ್ಟ್ ಮಾಡಲಿ ಮತ್ತು ಬೇಗನೆ ಎಲೆಕ್ಷನ್ ಮಾಡಿ ಎಂದು ಹೇಳಿದ್ದಾರೆ.
6ತಿಂಗಳಿಂದ ಮಾಡಿದ ಟೆಂಡರಗಳಿಗೆ ರಿವೀವ ಮಾಡಿ ಲಂಚದ ವಾಸನೆ ಬಂದರೆ ಬಿಡೋದಿಲ್ಲ ಎಂದು ವಾರ್ನಿಂಗ್ ಮಾಡಿದ್ದಾರೆ.
ಮರಜಾ ಮೋದಿ ಕೂಗಿದ ಜನರ ವಿರುದ್ದ ಕ್ರಮ ತೊಗೊಳ್ಳಿ ಅವರನ್ನ ಜೈಲಿಗೆ ಹಾಕಿ ಎಂದು ಸಿದ್ದು ಹೇಳಿದ್ದಾರೆ.ಅವರ ಮೇಲೆ ಯಾಕೆ ಇನ್ನು ಕ್ರಮ ತಗೊಂಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಟಿಪ್ಪು ಮುಗಿಸಿದಂಗೆ ಸಿದ್ದರಾಮಯ್ಯರವನ್ನು ಮುಗಿಸಿ ಎಂದು ಅಶ್ವಥ ನಾರಾಯಣ ಹೇಳಿದ ಮಾತಿಗೆ ಪ್ರಧಾನಿ ಅಶ್ವಥ ನಾರಾಯಣವರ ತಲೆ ಮೇಲೆ ಹೊಡೆದು ಬುದ್ದಿ ಹೇಳಬೆಕಿತ್ತು ಆದ್ರೆ ಪ್ರಧಾನಿ ಎನು ಹೇಳಲಿಲ್ಲ ಎಂದು ಸಿದ್ದು ಆರೋಪಿಸಿದ್ದಾರೆ.