ಬಿಜೆಪಿಯವರು ಸದನ ಹಾಳು ಮಾಡುತ್ತಿದ್ದಾರೆ: ತಿಮ್ಮಾಪುರ

  • shivaraj bandigi
  • 15 Jan 2024 , 12:18 AM
  • Belagavi
  • 294

ಬೆಳಗಾವಿ:

ಉತ್ತರ ಕರ್ನಾಟಕದ ಚರ್ಚೆಯ ಬಗ್ಗೆ ನಾವು ಸಿದ್ದರಿದ್ದೇವೆ‌. ಆದರೆ ಬಿಜೆಪಿಯವರು ಸದನ ಹಾಳು ಮಾಡುತ್ತಿದ್ದಾರೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.ಬಿಜೆಪಿಯವರು ಸಣ್ಣ ಸಣ್ಣ ವಿಚಾರಗಳಿಗೆ ವೇಳೆಯಲ್ಲಿ ಹಾಳು ಮಾಡುತ್ತಿದ್ದಾರೆ.ಉತ್ತರ ಕರ್ನಾಟಕ ಭಾಗದ ಚರ್ಚೆಗೆ ನಾವು ಸಿದ್ದ ಇದ್ದೇವೆ.ವಿರೋಧ ಪಕ್ಷದವರು ಸಹಕಾರ ಕೊಡಬೇಕು.ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ಬರ, ಕೃಷ್ಣ ಮೇಲ್ದಂಡೆ ಬಗ್ಗೆ ‌ಉತ್ತರ ಕೊಡಲು ನಾವು ಸಿದ್ದ. ಆದರೆ ಬಿಜೆಪಿಯವರು ಪೊಲೀಸ ಹಂಗ ಮಾಡಿದ್ದರು, ಹಿಂಗ ಮಾಡಿದರು ಅಂತ ಚರ್ಚೆ ಮಾಡ್ತಿದ್ದಾರೆ ಎಂದರು.

Read All News