ಬೆಳಗಾವಿ: ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಹರಘರ್ ತಿರಂಗಾ ಅಭಿಯಾನ ಹಮ್ಮಿಕೊಂಡಿದ್ದರು.
ಹೌದು ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳಾದ ಬೆಳಗಾವಿ,ಅಥಣಿ,ರಾಯಬಾಗ, ಹುಕ್ಕೇರಿ, ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಹರಘರ್ ತಿರಂಗಾ ಅಭಿಯಾನದ ಕುರಿತು ಜಾಗೃತಿ ನಡೆಸಲಾಯಿತು.
ಭಾರತೀಯ ಜನತಾ ಪಾರ್ಟಿ ಅಥಣಿ ಮಂಡಲ ಎಸ್ ಸಿ ಮೋರ್ಚಾ ಮಂಡಲ ಕಾರ್ಯಾಲಯದಲ್ಲಿ ಹರ ಘರ ತಿರಂಗಾ ಅಭಿಯಾನ ಹಾಗೂ ಕಿ ವೋಟರಸ ಕುರಿತು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಅವರ ವಿಶೇಷ ಸೂಚಣೆಯ ಮೇರೆಗೆ ಸಭೆ ನಡೆಸಿ ಮಹತ್ವದ ತಿರ್ಮಾನಗಳನ್ನ ತೆಗೆದುಕೊಳ್ಳಲಾಯಿತು.
ಈ ಸಭೆಯಲ್ಲಿ ಎಸ್ ಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಪೃಥ್ವಿ ಸಿಂಗ ಹಾಗೂ ಎಸ್ ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿಯಾದ ರಾವ ಬಹದ್ದೂರ ಕದಮ, ಬೆಳಗಾವಿ ಜಿಲ್ಲೆಯ ಎಸ್ಸಿ ಮೋರ್ಚಾ ಉಸ್ತುವಾರಿ ರಮೇಶ ಹರಿಜನ,ಮಂಡಲ ಅಧ್ಯಕ್ಷರಾದ ರಾಜಕುಮಾರ್ ಪಾಂಡುರಂಗ, ಸೇರಿದಂತೆ ಪಕ್ಷದ ಸದಸ್ಯರು ಉಪಸ್ಥಿತರಿದ್ದರು