ಬಿಜೆಪಿ ಪ್ರಧಾನಿ ಮೋದಿ ವರ್ಚಸೋ? ಕಾಂಗ್ರೆಸ್ ಗ್ಯಾರಂಟಿಗಳ ಆಶ್ವಾಸನೆಗಳೋ?

  • shivaraj bandigi
  • 16 Mar 2024 , 12:01 AM
  • Belagavi
  • 531

ಪ್ರಸ್ತುತ ಲೋಕಸಭಾ ಚುನಾವಣೆಯಿಂದ ರಾಜ್ಯದಲ್ಲಿ ಜಿದ್ದಾ ಜಿದ್ದಿನ ಕಣ ಏರ್ಪಟ್ಟು ಚುನಾವಣ ರಣರಂಗದ ಕಾವು ಜೋರಾಗಿದೆ ಇನ್ನೆನು ಕೆಲವೇ ದಿನದಲ್ಲಿ ಚುನಾವಣಾ ದಿನಾಂಕ ಪ್ರಕಟಿಸಲಾಗುವುದು.

ಇದರ ನಡುವೆಯು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ತಮ್ಮ ಇಪ್ಪತ್ತು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ ಮತ್ತು ಇದರ ತರವಾಯ ಕಾಂಗ್ರೆಸ್ ಪಕ್ಷವು ಸಹ ಮೊದಲ ಪಟ್ಟಿ ಬಿಡುಗಡೆ ಮಾಡಿದೆ ಒಂದು ಕಡೆ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ವರ್ಚಿಸಿನ್ನ ಮೇಲೆ ಬಿಜೆಪಿ ಅಭ್ಯರ್ಥಿಗಳು ಪ್ರಚಾರ ಮಾಡುತ್ತಿದ್ದಾರೆ. ಇದರ ನಡುವೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಕಾಂಗ್ರೆಸ್ ಪಕ್ಷ ಸಹ ರಾಜ್ಯದ ಕಳೆದ ಬಾರಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಮಂಡಿಸಿದ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರನ್ನು ತಲುಪಿ ರಾಜ್ಯದ ಪ್ರಜೆಗಳಿಗೆ ಹಲವಾರು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ ರಾಜ್ಯದಲ್ಲಿ ಇಗ ಕಾಂಗ್ರೆಸ್ ಸರ್ಕಾರ ಚುಕ್ಕಾಣೆ ಹಿಡಿದಿದೆ , ಎಲ್ಲ ಯೋಜನೆಗಳು ಸಹ ಎಲ್ಲ ವರ್ಗದ ಜನರಿಗೆ ಸಹ ತಲುಪಿವೆ ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರದ ವರ್ಚಸು ಇಗಿನ ಲೋಕಸಭಾ ಚುನಾವಣೆಗೆ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದೆ.

ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಗ್ಯಾರಂಟಿ ಸದ್ದು ಮಾಡುತ್ತಿದೆ ಕುಟುಂಬಕ್ಕೆ 1 ಲಕ್ಷ ಪರಿಹಾರ ದನ ಘೋಷಣೆ ಮಾಡಿ ಸರ್ಕಾರದ ಎಲ್ಲ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಹೊಂದಿದೆ.

ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿ ಸತತ ಎರಡು ಬಾರಿ‌ ಲೋಕಸಭಾ ಚುನಾವಣೆಯಲ್ಲಿ ವಿಜಯ ಸಾಧಿಸಿ ಹ್ಯಾಟ್ರಿಕ್ ಗೆಲವು ಸಾಧಿಸಲು ನಾನಾ ತರಹದ ಚುನಾವಣಾ ಕಸರತ್ತು ಮಾಡುತ್ತಿದೆ ,ಭಾರತ ದೇಶ ಪ್ರಧಾನಿ ಮೋದಿ ಇಂದ ಅಭಿವೃದ್ಧಿ ಪತದತ್ತ ಸಾಗುತ್ತ ಮೋದಿ ವರ್ಚಸ್ ದಿಂದ ಕರ್ನಾಟಕದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸಂಸದರಾಗಿ ಬಿಜೆಪಿ ಸರ್ಕಾರಕ್ಕೆ ಅಭೂತಪೂರ್ವ ಗೆಲುವು ತಂದು ಕೊಟ್ಟು ಮೋದಿ ಸರ್ಕಾರ ಆಡಳಿತ ಮತ್ತೆ ಮುಂದುವರೆಸಿ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಕಂಡು ಕೇಳದಂತೆ ಮಾಡಿತ್ತು ರಾಷ್ಟ್ರದ ಮೋದಿ ಎಂಬ ದೊಡ್ಡ ಅಲೆ ಇಂದ ನಮ್ಮ ಸರ್ಕಾರ ನಮ್ಮ ಪರಿವಾರ ಎನ್ನುವ ಘೋಷಣೆಯಿಂದ ಮತ್ತೆ ಇಗ 2024 ರ ಬರುವ ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಭರವಸೆ ಬಿಜೆಪಿಗರ ಮೇಲೆ ಇದೆ.

ಮೈ ಮೋದಿ ಪರಿವಾರ ಮೂಲಕ ಬಿಜೆಪಿ ಟ್ರೆಂಡ್ ಮಾಡಿ ಪ್ರತಿ ಘಟಾಣಿ ಗಟಿಗಳು ತಮ್ಮ ಹೆಸರಿನ ಮುಂದೆ ಮೈ ಮೋದಿ ಪರಿವಾರ ಎಂದು ಬರೆದುಕೊಂಡು ಮತ್ತೊಮ್ಮೆ ಮೋದಿ ಎಂದು ಬ್ರಹತ್ ಪ್ರಚಾರ್ ಮಾಡುತಿದ್ದಾರೆ.

ನಾವೇನು ಕಮ್ಮಿ ಇಲ್ಲ ಎಂದು ಕಾಂಗ್ರೆಸ್ ಕೂಡ ಭಾರತ ಜೋಡೋ ಯಾತ್ರೆ ಮುಂದಿಟ್ಟು ಬ್ರಹತ್ ಪ್ರಚಾರ್ ನಡೆಸುತಿದ್ದೆ.

ಫಿಕ್ಸ್ ಆಗದ ಟಿಕೆಟ್ 

ಕರ್ನಾಟಕದ ಎರಡನೇ ರಾಜ್ಯಧಾನಿ ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿ ಯಿಂದ ಜಗದೀಶ ಶೆಟ್ಟರ್ ಹೆಸರು ಹರಿದಾಡುತ್ತಿದ್ದು ಹೊರಗಿನವರಿಗೆ ಟಿಕೆಟ್ ಕೊಟ್ಟರೆ ನಾವು ಸಹಿಸುವದಿಲ್ಲ ಎಂದು ಬೆಳಗಾವಿಯಲ್ಲಿ ಗುಸುಗುಸು ನಡೆದಿದೆ.

ಕಾಂಗ್ರೆಸನಿಂದ ಲಕ್ಷ್ಮಿ ಹೆಬ್ಬಾಳ್ಕರವರ ಪುತ್ರ ಮೃಣಾಲ ಹೆಬ್ಬಾಳ್ಕರ್ ಹೆಸರು ಖಚಿತ ಎಂದು ಹೇಳುತ್ತಿರುವ ಕಾಂಗ್ರೆಸ್ ಪಡೆ ಯಾರ್ ಪಾಲಿಗೆ ಬೆಳಗಾವಿ ಟಿಕೆಟ್ ಎಂಬುದು ಯಕ್ಷ ಪ್ರಶ್ನೆಯಾಗಿದೆ.

Read All News