ಬೆಂಗಳೂರು: ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಜೋಶಿ ಹೆಸರು ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.
ಅವರು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, ಗೋಪಾಲ್ ಜೋಶಿ ಅವರೊಂದಿಗೆ ತಮ್ಮ ಸಂಬಂಧವು 32 ವರ್ಷಗಳ ಹಿಂದೆವೇ ಅಂತ್ಯಗೊಂಡಿರುವುದಾಗಿ ತಿಳಿಸಿದರು. 2013ರ ನವೆಂಬರ್‌ನಲ್ಲಿ ನಾನು ಬೆಂಗಳೂರಿನ ನಗರ ನಾಗರಿಕ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದೆ, 20 ವರ್ಷಗಳಿಂದ ನಾವು ಬೇರ್ಪಟ್ಟಿದ್ದೇವೆ ಎಂದು. ಈಗ ಈ ಅವಧಿ 32 ವರ್ಷಗಳಾಗಿದೆ.ಎಂದು ಜೋಶಿ ಹೇಳಿದರು.
ತಾವು ಕೇವಲ ಇಬ್ಬರು ಸಹೋದರರನ್ನು ಹೊಂದಿದ್ದು, ತನಗೆ ಯಾರೂ ಸಹೋದರಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ವಿಜಯಲಕ್ಷ್ಮಿ ಜೋಶಿ ನನ್ನ ಸಹೋದರಿಯಾಗಿದ್ದಾರೆಂಬ ಪ್ರಸ್ತಾಪ ಸಂಪೂರ್ಣ ತಪ್ಪಾಗಿದೆ, ಎಂದು ಅವರು ತಿಳಿಸಿದ್ದಾರೆ.
ಎಫ್‌ಐಆರ್‌ನಲ್ಲಿ ನೀಡಲಾಗಿರುವ ಸುನೀತಾ ಚೌವಾಣ್ ಅವರು ಗೋಪಾಲ್ ಜೋಶಿಯೊಂದಿಗೆ ಜೋಶಿಯ ಕಚೇರಿಗೆ ಭೇಟಿ ನೀಡಿದರೆಂಬ ಆರೋಪ ಸಂಪೂರ್ಣ ನಿಜವಲ್ಲ ಎಂದು ಅವರು ತಿರಸ್ಕರಿಸಿದರು.
ಜೋಶಿ 2012ರಲ್ಲಿ ಕುಟುಂಬದ ಆರ್ಥಿಕ ಹಾಗೂ ಸಾಮಾಜಿಕ ಒಕ್ಕೂಟವನ್ನು ಮುಕ್ತಾಯಗೊಳಿಸಲು ವೈವಸ್ತಾ ಪತ್ರ(Family Arraignment Deed) ಕಾರ್ಯಗತಗೊಳಿಸಿದ್ದಾಗಿ ತಿಳಿಸಿದರು, “ನಾವು ಯಾವುದೇ ಒಕ್ಕೂಟದ ಕುಟುಂಬದ ಆರ್ಥಿಕ ಅಥವಾ ಸಾಮಾಜಿಕ ವ್ಯವಹಾರಗಳನ್ನು ಹೊಂದಿಲ್ಲ, ಎಂದು ಅವರು ಹೇಳಿದರು.
ಅದೇ ವರ್ಷ 2012ರಲ್ಲಿ, ಪ್ರಹ್ಲಾದ್ ಜೋಶಿ ಸಾರ್ವಜನಿಕ ಎಚ್ಚರಿಕೆ ನೋಟಿಸ್‌ನ್ನು ಮಾಧ್ಯಮಗಳಲ್ಲಿ ಪ್ರಕಟಿಸಿದ್ದರು ಎಂಬುದನ್ನು ಅವರು ಪುನರುಚ್ಚರಿಸಿದರು.
ಈ ಪ್ರಕಾರ, ಪ್ರಹ್ಲಾದ್ ಜೋಶಿ ತಮ್ಮನ್ನು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತರುವ ಆರೋಪಗಳನ್ನು ತೀವ್ರವಾಗಿ ತಿರಸ್ಕರಿಸಿದ್ದಾರೆ.