ಬೆಳಗಾವಿ :
ಮುಸ್ಲಿಂ ಸಮುದಾಯ ವಿರುದ್ಧ ಮಾತನಾಡಿ ಮತ ಪಡೆದಿರುವ ಶಾಸಕ ಯತ್ನಾಳನಿಂದಲೇ ಬಿಜೆಪಿ ಸರ್ವನಾಶವಾಗುತ್ತದೆ ಎಂದು ಶಾಸಕ ಸಿ. ಪುಟ್ಟರಂಗ ಶೆಟ್ಟಿ ಹೇಳಿದರು.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಸ್ಲಿಂ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಬಸನಗೌಡ ಪಾಟೀಲ ಯತ್ಮುಸ್ಲಿಂರನ್ನು ತುಚ್ಚವಾಗಿ ಕಾಣುತ್ತಾ, ಅವರು ವಿರುದ್ಧ ಹೇಳಿಕೆ ನೀಡುತ್ತಾ ಚುನಾವಣೆಯಲ್ಲಿ ಅವರು ಗೆದ್ದಂಥವರು. ಯತ್ನಾಳೆ ನಾನೇ ಮಹಾನ್ ನಾಯಕ ಎಂಬಂತೆ ಮಾತಾಡ್ತಾರೆ. ಸ್ವಪಕ್ಷಿಯರ ವಿರುದ್ದವೇ ಅವರು ಹೇಳಿಕೆಗಳನ್ನು ನೀಡ್ತಾರೆ.
ಅವರ ಪಕ್ಷದ ಹೈಕಮಾಂಡ್ ಆಯ್ಕೆಗಳನ್ನು ಒಪ್ಪಲು ತಯಾರಿಲ್ಲ.ಬಿಜೆಪಿಯಲ್ಲಿ ಇಂತಹ ನಾಯಕರನ್ನು ಬೆಳೆಸಿದ್ರೆ ಬಿಜೆಪಿ ಸರ್ವನಾಶವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.