ಹೈನುಗಾರಿಕೆಯಿಂದ ತಮ್ಮ ಆರ್ಥಿಕಾಭಿವೃದ್ಧಿಯನ್ನು ವೃದ್ಧಿಸಿಕೊಳ್ಳಿ : ಸರ್ವೋತ್ತಮ

  • Shivaraj Bandigi
  • 13 Jan 2024 , 4:35 PM
  • Belagavi
  • 164

ಗೋಕಾಕ : ಕೆಎಂಎಫ್‌ನಿoದ ರೈತ ಸಮೂಹಕ್ಕೆ ಸಾಕಷ್ಟು ಯೋಜನೆಗಳಿದ್ದು, ಅಂತಹ ಯೋಜನೆಗಳ ಸದುಪಯೋಗಕ್ಕೆ ರೈತರು ಮುಂದೆ ಬಂದು ತಮ್ಮ ಹೈನುಗಾರಿಕೆಯ ಜೊತೆಗೆ ಆರ್ಥಿಕಾಭಿವೃದ್ಧಿಯನ್ನು ವೃದ್ಧಿಸಿಕೊಳ್ಳುವಂತೆ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ತಿಳಿಸಿದರು.

ಬುಧವಾರದಂದು ನಗರದ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ೧೨ ಲಕ್ಷ ರೂ. ಮೊತ್ತದ ವಿವಿಧ ಯೋಜನೆಗಳ ಚೆಕ್‌ಗಳನ್ನು ರೈತರಿಗೆ ವಿತರಿಸಿ ಮಾತನಾಡಿದ ಅವರು, ಸಹಕಾರಿ ಸ್ವಾಮ್ಯದ ಕೆಎಂಎಫ್ ರೈತರಿಗಾಗಿಯೇ ಇರುವ ದೇಶದ ೨ನೇ ದೊಡ್ಡ ಸಂಸ್ಥೆ ಎಂದು ಹೇಳಿದರು.

ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಂ.ಬಿ. ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣಪ್ಪ, ಉಪ ವ್ಯವಸ್ಥಾಪಕ ಯಾಸೀನ ಮುಲ್ಲಾ, ಶಾಸಕರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ಮೂಡಲಗಿ ಉಪಕೇಂದ್ರದ ಅಧಿಕಾರಿ ರವಿ ತಳವಾರ, ಗೋಕಾಕ ಉಪಕೇಂದ್ರ ಅಧಿಕಾರಿ ಬಿ.ಕೆ. ಜಾಧವ, ವಿಸ್ತರಣಾಧಿಕಾರಿಗಳಾದ ವಿಠ್ಠಲ ಲೋಕುರಿ, ಸಚೀನ ಪಡದಲ್ಲಿ, ಬೀರೇಶ ಖಿಲಾರಿ, ಸುರೇಶ ಪಾಟೀಲ, ಪಶು ವೈದ್ಯಾಧಿಕಾರಿಗಳಾದ ಡಾ.ಸಚೀನ ಬಿರಡಿ, ಡಾ.ಈರಣ್ಣ ಕೌಜಲಗಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಒಟ್ಟು ೧೨.೧೦ ಲಕ್ಷ ರೂ.ಗಳ ಮೊತ್ತದ ಚೆಕ್‌ಗಳನ್ನು ಇದೇ ಸಂದರ್ಭದಲ್ಲಿ ಸರ್ವೋತ್ತಮ ಜಾರಕಿಹೊಳಿ ಅವರು ರೈತ ಫಲಾನುಭವಿಗಳಿಗೆ ವಿತರಿಸಿದರು. ಇದರಲ್ಲಿ ಕಟ್ಟಡ ಅನುದಾನ, ರಾಸು ವಿಮೆ ಮತ್ತು ಕಲ್ಯಾಣ ಸಂಘದಿoದ ಈ ಚೆಕ್‌ಗಳನ್ನು ವಿತರಿಸಲಾಯಿತು.

Read All News