ಬಿಜೆಪಿ ಇರುವವರೆಗೆ ಮೀಸಲಾತಿ ರದ್ದುಪಡಿಸಲು ಸಾಧ್ಯವಿಲ್ಲ: ಅಮಿತ್ ಶಾ

  • krishna s
  • 11 Sep 2024 , 7:07 AM
  • Delhi
  • 316

ದೇಶವನ್ನು ವಿಭಜಿಸಲು ಬಲಗೊಳ್ಳುವವರ ಜೊತೆ ನಿಂತು, ದೇಶವಿರೋಧಿ ಹೇಳಿಕೆಗಳನ್ನು ನೀಡುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಚಟವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಜೆಕೆಎನ್‍ಸಿಯ ದೇಶವಿರೋಧಿ ಮತ್ತು ಮೀಸಲಾತಿ ವಿರೋಧಿ ಧೋರಣೆಯನ್ನು ಬೆಂಬಲಿಸೋದು ಅಥವಾ ವಿದೇಶದ ವೇದಿಕೆಗಳಲ್ಲಿ ದೇಶದ ವಿರುದ್ಧ ಹೇಳಿಕೆಗಳನ್ನು ನೀಡುವುದು ಇರಲಿ, ರಾಹುಲ್ ಗಾಂಧಿ ಸದಾ ದೇಶದ ಭದ್ರತೆಗೆ ಧಕ್ಕೆ ತರುತ್ತಲೇ ಇದ್ದಾರೆ ಎಂದು ಅಮಿತ್ ಶಾ ಕಿಡಿ ಕಾರಿದ್ದಾರೆ.

ರಾಹುಲ್ ಗಾಂಧಿಯ ಹೇಳಿಕೆಗಳು, ಕಾಂಗ್ರೆಸ್ ಪಕ್ಷವು ಪ್ರಾದೇಶಿಕತೆ, ಧರ್ಮ ಮತ್ತು ಭಾಷಾ ವ್ಯತ್ಯಾಸಗಳ ಆಧಾರದ ಮೇಲೆ ಭಿನ್ನತೆ ಮೂಡಿಸುವ ರಾಜಕಾರಣ ಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತವೆ ಎಂದು ಶಾ ಹೇಳಿದ್ದಾರೆ.

ರಾಹುಲ್ ಗಾಂಧಿಯು ದೇಶದಲ್ಲಿ ಮೀಸಲಾತಿ ರದ್ದುಪಡಿಸುವ ಬಗ್ಗೆ ಮಾಡಿದ ಹೇಳಿಕೆ, ಕಾಂಗ್ರೆಸ್ ಪಕ್ಷದ ಮೀಸಲಾತಿ ವಿರೋಧಿ ನಿಲುವನ್ನು ಮತ್ತೊಮ್ಮೆ ಬಯಲು ಮಾಡುತ್ತದೆ. ಅವರ ಮನಸ್ಸಿನಲ್ಲಿದ್ದ ಆಲೋಚನೆಗಳು ಪದಗಳ ಮೂಲಕ ಹೊರಬಂದಿವೆ.

ಬಿಜೆಪಿ ಇರುವವರೆಗೆ, ಯಾರು ಮೀಸಲಾತಿಯನ್ನು ರದ್ದುಪಡಿಸಲಾರರು, ಹಾಗೇ ದೇಶದ ಭದ್ರತೆಗೆ ಯಾರೂ ಧಕ್ಕೆ ತರಲಾರರು ಎಂದು ರಾಹುಲ್ ಗಾಂಧಿಗೆ ತಿಳಿಸಲು ಬಯಸುತ್ತೇನೆ ಎಂದು ಶಾ ಹೇಳಿದ್ದಾರೆ.

Read All News