ಬೆಳಗಾವಿ :
ಕನ್ನಡ ಹೋರಾಟಗಾರರ ಮೇಲೆ ದಾಖಲೆ ಮಾಡಿರುವ ಮೊಕ್ಕದಮ್ಮೆಗಳನ್ನು ಹಾಗೂ ರೌಡಿಶೀಟರ್ ಹಿಂಪಡೆಯಬೇಕೆಂದು ಕರುನಾಡು ವಿಜಯ ಸೇನೆಯ ದೀಪಕ ಹೇಳಿದರು.
ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕನ್ನಡ ಹೋರಾಟಗಾರರು ಬದುಕನ್ನು ವಣವಾಗಿ ಇಟ್ಟು ಹೋರಾಡುವವರ ಮೇಲೆ ಗುಂಡಾ ಕಾಯ್ದೆ ಕೊಲೆಯತ್ನ ಕಾನೂನು ಉಲ್ಲಂಘನೆ ಇಂತಹ ಅನೇಕ ಮೋಕ್ಕದಮ್ಮೆಗಳನ್ನು ಹುಡುಕಿ ಪ್ರಕರಣವನ್ನು ದಾಖಲು ಮಾಡುತ್ತಿರುವುದನ್ನು ಖಂಡನೀಯ ಎಂದರು.
ಕನ್ನಡ ಹೋರಾಟಗಳನ್ನು ಹತ್ತಿಕ್ಕಲು ಯತ್ನಿಸುವುದು ನಾಚಿಕೆಗೇಡಿನ ಸಂಗತಿ ನಾಡ ರಕ್ಷಣೆಗೆ ಧ್ವನಿ ಎತ್ತುವರ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಈ ನಾಡಿಗೆ ಕುತ್ತು ಬಂದಾಗ ಬೀದಿಗಿಳಿದು ಈ ನಾಡನ್ನು ರಕ್ಷಣೆ ಮಾಡಿಕೊಳ್ಳುವರು ಯಾರು? ನಾಡದ್ರೋಹಿಗಳು ಏಸಿ ರೂಮಿನಲ್ಲಿ ನಾಡ ರಕ್ಷಕರು ಜೈಲಿನಲ್ಲಿ ಇದು ಏಂತ ದುರಂತ ಪುಸ್ತುತ ಸರ್ಕಾರ ಈ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕನ್ನಡಪರ ಹೋರಾಟಗಾರರ ಮೇಲೆ ದಾಖಲಿಸಿರುವ ಮೋಕ್ಕದಮ್ಮೆಗಳನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದರು.