ಸ್ಯಾಂಡೆಲವುಡ್ ಖ್ಯಾತ ನಟಿ ರಚಿತಾ ರಾಮ ವಿರುದ್ದ ಬಿತ್ತು ಕೇಸ

  • 14 Jan 2024 , 10:51 PM
  • Bengaluru
  • 127

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟಿ ರಚಿತಾ ರಾಮರವರು ದಿನಾಂಕ 07 .01. 2023 ರಂದು ಒರಿಯನ್ ಮಾಲ್ ನಲ್ಲಿ ಕ್ರಾಂತಿ ಸಿನಿಮಾ ಪ್ರಮೋಷನ್ ಮಾಡುವ ಬಹಿರಂಗ ಸಭೆ ಸಂದರ್ಭದಲ್ಲಿ ಇಷ್ಟು ವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ಮಾಡಿದ್ದೇವೆ ಈ ವರ್ಷ ಬರಿ ಕ್ರಾಂತಿಯೋತ್ಸವ ಅಷ್ಟೇ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದು ದೇಶಭಿಮಾನಿಗಳಿಗೆ ದಕ್ಕೆ ತರುವಂತ ವಿಚಾರ.

ರಾಷ್ಟ್ರೀಯ ಹಬ್ಬವಾದ ಗಣರಾಜೋತ್ಸವ ಹಬ್ಬವನ್ನು ಹಗುರವಾಗಿ ಮಾತನಾಡಿರುವ ಇವರ ಹೇಳಿಕೆಯಿಂದ ದೇಶ ಪ್ರೇಮಿಗಳಿಗೆ ಧಕ್ಕೆಯಾಗಿದೆ. ಇವರು ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಕರ್ನಾಟಕ ಭೀಮ ಸೇನೆ ಮಹಿಳಾ ರಾಜ್ಯಾಧ್ಯಕ್ಷೆ ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಟಿ ರಚಿತಾ ರಾಮ್ ರವರನ್ನು ಬಂಧಿಸಿ ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮಾನ್ಯ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇವೆ, ಮತ್ತು ನಟಿ ರಚಿತಾ ರಾಮ್ ರವರು ಬಹಿರಂಗವಾಗಿ ಹೇಳಿಕೆ ಕುರಿತು ಕ್ಷಮೆ ಯಾಚಿಸಬೇಕು ಗಣರಾಜ್ಯೋತ್ಸವಕ್ಕೆ ಹಗುರವಾಗಿ ಮಾತನಾಡಿರುವ ಇವರು ಸಂವಿಧಾನಕ್ಕೆ ಅಗೌರವ ಹೇಳಿಕೆ ಎಂದು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ಕರ್ನಾಟಕ ಭೀಮ್ ಸೇನೆ (ರಿ) ರಾಜ್ಯ ಸಮಿತಿ ಮತ್ತು ವಿವಿಧ ದಲಿತಪರ ಸಂಘಟನೆಗಳು ದಿನಾಂಕ 23/01/2023 ರಂದು ರಚಿತಾ ರಾಮ್ ವಿರುದ್ಧ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಹೋರಾಟಕ್ಕೆ ಕರೆ ನೀಡುತ್ತೇವೆ ಹೇಳಿಕೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ಲಗತಿಸಿದ್ದೇವೆ ಎಂದು ಹೇಳಿದ್ದಾರೆ.

Read All News