ಮೀನಿನ ಬಲಿಗೆ ಸಿಲುಕಿ ;ಮೀನುಗಾರ ಸಾವು

  • shivaraj bandigi
  • 2 May 2024 , 12:01 PM
  • Belagavi
  • 444

ಅಥಣಿ : ಮೀನು ಹಿಡಿಯಲು ಹೋಗಿ ಬಲಿಗೆ ಸಿಲುಕಿ ನದಿಯಲ್ಲಿ ಮುಳುಗಿ ಜೀವ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಇಂದು ಬೆಳಂ ಬೆಳಿಗ್ಗೆ ಸತ್ತಿ ಗ್ರಾಮದಲ್ಲಿ ನಡೆದಿದೆ.

ಅಥಣಿ ತಾಲೂಕಿನ ಹಳ್ಯಾಳ ಗ್ರಾಮದ ಮಹಾಂತೇಶ ದುರ್ಗಪ್ಪ ಕರಕರಮುಂಡಿ (35) ಮೃತ ದುರ್ದೈವಿ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ. ಮಹಾಂತೇಶ ಎಂದಿನಂತೆ ಇಂದು ಬೆಳಿಗ್ಗೆ ಸತ್ತಿ ಗ್ರಾಮದ ಹೊರವಲಯದ ಕೃಷ್ಣ ನದಿಯಲ್ಲಿ ಮೀನು ಹಿಡಿಯಲು ಹೋಗಿ ಮೀನಿಗೆ ಬಲಿ ಹಾಕುವ ವೇಳೆ ಕಾಲಿಗೆ ಬಲಿ ಸಿಲುಕಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ 

ಸ್ಥಳೀಯರ ಸಹಾಯದಿಂದ ಮೃತ ದೇಹ ಹೊರತೆಗೆಯಲಾಗಿದ್ದು ಸ್ಥಳಕ್ಕೆ ಅಥಣಿ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮೃತ ಮಹಾಂತೇಶ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 ವರದಿ :  ರಾಹುಲ್  ಮಾದರ 

Read All News