ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವತಿಯಿಂದ ಶಾಹೂ ಮಹಾರಾಜರ ಜಯಂತಿ ಆಚರಣೆ

  • shivaraj bandigi
  • 28 Jun 2024 , 4:52 PM
  • Athani
  • 8539

ಅಥಣಿ : ಶಾಹು ಮಹಾರಾಜರ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಜಿಲ್ಲಾ ಸಂಘಟನಾ ಸಂಚಾಲಕ ಸಂಜು ತಳವರಕರ ಹೇಳಿದರು.   

 ಅವರು ಅಥಣಿ ಪ್ರವಾಸ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ತಾಲೂಕಾ ಅಧ್ಯಕ್ಷರ ರವಿ ಕಾಂಬಳೆ ಅವರ ನೇತೃತ್ವದಲ್ಲಿ ಇಂದು ಅಥಣಿ ಮತ್ತು ಕಾಗವಾಡದ ಸಂಘಟನೆ ಕಾರ್ಯಕರ್ತರು ಸೇರಿ ಶಾಹೂ ಮಹಾರಾಜರ ಪೋಟೋ ಪೂಜೆ ನೇರವೆರಿಸಿ ಹಾಗೂ ತಿಂಗಳ ಸಭೆ ಉದ್ದೇಶಿಸಿ ಮಾತನಾಡಿದರು.      

 ಅಸ್ಪೃಶ್ಯರ ಪ್ರಗತಿಗಾಗಿ ಅವರ ಚಳವಳಿ ವಿಸ್ತೃತಗೊಳಿಸಲು ದಲಿತರನ್ನು ಮೇಲೆ ತರಬೇಕು ಎಂದು ಪ್ರಮಾಣಿಕ ಪ್ರಯತ್ನಿಸಿದವರಲ್ಲಿ ರಾಜರ್ಷಿ ಛತ್ರಪತಿ ಶಾಹೂ ಮಹಾರಾಜರು ಒಬ್ಬರು. ಇವರ ಸಂಘರ್ಷದ, ಹೋರಾಟದ ಹಾಗೂ ಜಾತೀರಹಿತ ಮನಸ್ಥಿತಿ, ಇವರು ತಂದ ಸುಧಾರಣೆಗಳ ಅಂಬೇಡ್ಕರ್ ಅವರು ಓದಲು, ದಲಿತರು ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟರು. ಮಹಿಳೆಯರನ್ನು ಕ್ರೂರವಾಗಿ ನಡೆಸಿಕೊಳ್ಳಬಾರದು ಎಂದು ಕಾಯ್ದೆಯನ್ನು ಜಾರಿ ತಂದರು. ದಲಿತರಿಗೆ ರಿಸರ್ವೇಶನ್ ಕೊಡಿಸುವಲ್ಲಿ ಶಾಹೂ ಮಹಾರಾಜರ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು. ಹೇಳಿದರು. 

 ಈ ಕಾರ್ಯಕ್ರಮದಲ್ಲಿ ಅಥಣಿ ಸಂಚಾಲಕ ರವಿ ಕಾಂಬಳೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಬೆಳಗಾವಿ ಜಿಲ್ಲಾ ಸಂಚಾಲಕರ ಶ್ರೀಕಾಂತ ತಳವಾರ ಮಾತನಾಡಿದರು. 

ಈ ವೇಳೆಯಲ್ಲಿ ಬೆಳಗಾವಿ ಜಿಲ್ಲಾ ಸಂಘಟನಾ ಸಂಚಾಲಕ ಕುಮಾರ ಬನಸೋಡೆ, ಮಚ್ಚೆoದ್ರ ಖಾoಡೇಕರ, ಬಾಲಕೃಷ್ಣ ಭಜೇಂತ್ರಿ, ಅಶೋಕ ಚೌಗಲಾ, ನಿಜಾಮ ಮುಲ್ಲಾ, ಪಾಂಡು ಕಾಂಬಳೆ, ಮಹಾಂತೇಶ ಬನಸೋಡೆ, ರಾಜು ಪರ್ನಾಕರ, ವಿನಾಯಕ ಕಾಂಬಳೆ, ಚಂದು ಬನಸೋಡೆ, ಧನಪಾಲ ಕಾಂಬಳೆ, ದತ್ತು ಕಾಂಬಳೆ, ಕಾಂಬಳೆ,ಮಹಾವೀರ ಸಂಕೋನಟ್ಟಿ,ಮಲ್ಲಿಕಾರ್ಜುನ ದಳವಾಯಿ, ಶಾಂತಪ್ಪ ಕಾಂಬಳೆ,ಮಹಾದೇವ ಮಾದರ, ಗೊರಖನಾಥ ಭಂಡಾರೆ, ಶಂಕರ ಕಾಂಬಳೆ, ನಾಗರಾಜ ದೊಡಮನಿ, ರಮೇಶ ಮೇಲಕೇರಿ, ಶಿವರಾಜ ಕಾಮತ, ಅಶೋಕ ಗೇರಡಿ, ಪರಶುರಾಮ ಕಾಂಬಳೆ, ಸುರೇಶ ಕಾಂಬಳೆ.ಮೋಹನ ಸಿಂಗೆ, ಮಹಾದೇವ ಪೂಜಾರಿ, ಕುಮಾರ ಚೌಗಲಾ, ಉಪಸ್ಥಿತರಿದ್ದರು.

ವರದಿ  : ರಾಹುಲ್   ಮಾದರ

Read All News