ಶತಾಯುಷಿ ಸ್ವಾತಂತ್ರ್ಯಯೋಧೆ ಚಂದ್ರವ್ವ. ಕಾಡಪ್ಪ ಗೋಲಬಾವಿ ನಿಧನ

  • shivaraj bandigi
  • 19 May 2024 , 3:49 PM
  • Belagavi
  • 308

ಅಥಣಿ : ತಾಲೂಕಿನ ಗುಂಡೇವಾಡಿ ಗ್ರಾಮದ ಶತಾಯುಷಿ ಸ್ವಾತಂತ್ರ್ಯಯೋಧೆ ಚಂದ್ರವ್ವ. ಕಾಡಪ್ಪ ಗೋಲಬಾವಿ ವಯೋಸಹಜ ಕಾಯಿಲೆಯಿಂದ ಇಂದು  ನಿಧನರಾಗಿದ್ದಾರೆ.

1947 ರ ಭಾರತ ಸ್ವಾತಂತ್ರ ಸಂಗ್ರಾಮದಲ್ಲಿ ಇಂಚಗೇರಿ ಮಠದ ಪೂಜ್ಯ ಮಠಾಧಿಪತಿಯಾಗಿದ್ದ  ಮಾಧವಾನಂದ ಪ್ರಭುಜಿಯವರ ಜೊತೆಗೆ ತಮ್ಮ ಪತಿ ಕಾಡಪ್ಪ ಗೋಲಬಾವಿ ಹಾಗೂ ಚಂದ್ರವ್ವ ಗೋಲಬಾವಿಯವರು ಸತತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿ ಮಾಧವಾನಂದ ಪ್ರಭುಜಿ ಅವರ ನೇತೃತ್ವದಲ್ಲಿ ಸ್ವಾತಂತ್ರ ಹೋರಾಟಕ್ಕೆ  ದಿವ್ಯ ಶಕ್ತಿಯನ್ನು ತುಂಬಿ ದೇಶ ಸೇವೆ ಗೈದವರು. ಅಪಾರವಾದ ಮಾಧವಾನಂದ ಪ್ರಭುಜಿ ಯವರ ದೇಶ ಭಕ್ತ ಬಳಗಕ್ಕೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರಂತರವಾಗಿ 

ಉಟೋಪಚಾರದ ಜೊತೆಗೆ ಸಹಕಾರ ನೀಡಿದ್ದರು. ಇಂದು ಸ್ವಗ್ರಾಮ ಅಥಣಿ  ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ಪೂಜ್ಯ ಮಠಾಧೀಶರ  ಹಾಗೂ ಹಲವಾರು ಮುಖಂಡರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ಜರುಗಿತು.

ವರದಿ : ರಾಹುಲ್  ಮಾದರ 

Read All News