ಮಾಸ್ತ ಮರಡಿ ಯಲ್ಲಿ ಯಶಸ್ವಿ ಯಾಗಿ ಜರುಗಿದ ಕೇಂದ್ರ ಮಟ್ಟದ ಪ್ರತಿಭಾ ಕಾರಂಜಿ

  • 15 Jan 2024 , 1:21 AM
  • Belagavi
  • 195

ಬೆಳಗಾವಿ:ತಾಲೂಕಿನ ಹಲಗಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಅತಂತ್ಯ ವವ್ಯಸ್ಥಿತ ರೀತಿಯಲ್ಲಿ ಆಯೋಜನೆಗೊಂಡು ಯಶಸ್ವಿಯಾಗಿ ಶುಕ್ರವಾರವು ಮಾಸ್ತ ಮರಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಜರುಗಿ ಸಭಿಕರ ಜನಮನ ಸೆಳೆಯಿತು .

ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕಾ ವಲಯದ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಆರ್ .ಪಿ. ಜುಟ್ಟನವರರವರು ಜ್ಯೋತಿ ಬೆಳಗಿಸಿ ನೆರವೇರಿಸಿ ಕಾರ್ಯಕ್ರಮ ಶುಭ ಕೋರಿದರು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಈ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ, ಮಕ್ಕಳಲ್ಲಿ ಶೈಕ್ಷಣಿಕ ಹಾಗೂ ಇತರೆ ಸೃಜನಾತ್ಮಕ ಕಲೆ ಚಟುವಟಿಕೆಗಳಲ್ಲಿ ಅಸಕ್ತಿ ಬೆಳೆಸಲು ಶ್ರಮಿಸಲು ಶಿಕ್ಷಕರಿಗೆ ಕರೆ ನೀಡಿದರು .

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿ ಆರ್ ಸಿ ಸಮನ್ವಯಾಧಿಕಾರಿ ಗಳಾದ ಡಾ,ಎಮ್.ಎಸ್ . ಮೇದಾರ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಪ್ರಕಾಶಗೌಡ ಪಾಟೀಲ ಮಾತನಾಡಿ ಮಾಸ್ತಮರಡಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಶೈಕ್ಷಣಿಕ ಕಾರ್ಯಚಟುವಟಿಕೆ ಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು, ಶಾಲಾ ವಾತಾವರಣ ಖುಷಿ ನೀಡುತ್ತದೆ, ಪ್ರಗತಿಪಥದಂತ ಮುಂದೆ ಸಾಗಲೆಂದರು, ಪ್ರತಿಭಾ ಕಾರಂಜಿಯ ಸ್ಪರ್ಧೆಗಳ ದಾಖಲೆಗಳನ್ನು ಅತಿಥಿಗಳು ಬಿಡುಗಡೆ ಮಾಡಿದರು,ಮುಖ್ಯ ಅತಿಥಿಗಳನ್ನು, ಗ್ರಾಮಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಸದಸ್ಯರಾದ ಶ್ರೀಮತಿ ಮಹಾನಂದ ಮರಕಟ್ಟಿ, ಸಾಗರ ಕುರಂಗಿ, ಶ್ರೀಮತಿ ಅನ್ನಪೂರ್ಣ ಬುರಾಣಿ, ಎಸ್ ಡಿ ಎಮ್ ಸಿ ಎಮ್ ಸಿ ಸದಸ್ಯರಾದ ಈರಪ್ಪ ಮಾತಾರಿ, ಅನಿತಾ ತಾರೇಕಾರ, ಸಿದ್ದಪ್ಪ ಕುರಂಗಿ, ಶ್ರೀಮತಿ ಸುನೀತಾ ಕುರಂಗಿ, ಹಾಗೂ ಗ್ರಾಮಸ್ಥರಾದ ಶಂಕರ ಅಂಬೋಜಿ, ರಾಘವೇಂದ್ರಮಾವಿನಕಟ್ಟಿ, ಬಸವರಾಜ ಪಾಟೀಲ,ಶಿಕ್ಷಣ ಸಂಯೋಜಕ ಬಿ ಎಮ್ ಬಡಿಗೇರ, ಬಿ ಆರ್ ಪಿ ಶಂಕರ ತಾರಾಪುರ, ಆಯ,ಆರ್,ಮೇಟ್ಯಾಳಮಠ,ಶಿಕ್ಷಕರ,ಸಂಘದಅನ್ವರಲಂಗೋಟಿ,ಆಯ್ ಬಿ ಗೂಳಪ್ಪನವರ ಸೇರಿದಂತೆ ಕೇಂದ್ರ ಶಾಲೆಗಳ ಮುಖ್ಯ್ಯೊಪಾದ್ಯಾಯರು, ಶಿಕ್ಷಕರು ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮ ಯಶಸ್ವಿಗೆ ಶಿಕ್ಷಕರಾದ ಆನಂದ ಢಗೆ, ರಾಜು ಅರಳಿಕಟ್ಟಿ,ಪಿ ಎನ್.ಪಾಟೀಲ, ಆರ್ ಎಮ್ ಪಾಟೀಲ, ಎ ಸಿ ಮಾಡಿಗರ, ಲಕ್ಷ್ಮಣ ತಳವಾರ, ಅರುಣ ಬಸವಂತ ಸಾವಕಾರ ಸಂತೋಷಸಂತಿಬಸ್ತವಾಡ, ವಿ ಎಸ್ ಚವಾಣ್, ಗೋಪಾಲ ಕೋಲಕಾರ, ಶ್ರೀಮತಿ ಬಿ ಎಸ್ ಇಂಗನಹಳ್ಳಿ, ಶ್ರೀಮತಿ ವಿ ಸಿ ಕೊಷ್ಠಿ, ಶ್ರೀಮತಿ ಮಹಾಲಕ್ಷ್ಮೀ ಪಾಟೀಲ ಶ್ರಮಿಸಿದರು ದಿನಪೂರ್ತಿ ವಿವಿಧ ಸ್ಪರ್ಧೆಗಳು ನಡೆದವು, ಸಂಜೆ ವಿಜೇತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ, ಪ್ರಮಾಣಪತ್ರ ವಿತರಿಸಲಾಯಿತು ಕಾರ್ಯಕ್ರಮ ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ, ಸ್ವಾಗತಗೀತೆ ಪ್ರಸ್ತುತ ಪಡಿಸಿದರು, ಮಾಸ್ತ ಮರಡಿಯ ಶಾಲಾಹಿರಿಯ ಮುಖ್ಯ್ಯೊಪಾದ್ಯಾಯರಾದ ಬಸವರಾಜ ಸುಣಗಾರ ಸ್ವಾಗತಿಸಿದರು, ಸಿ ಆರ್ ಪಿ ಶ್ರೀಮತಿ ಎಫ್ ಎಸ್ ಮುಲ್ಲಾ ಪ್ರಾಸ್ತಾವಿಕ ವಾಗಿ ಮಾತನಾಡಿದರು, ಶಿಕ್ಷಕರಾದ ಬಸವರಾಜ ಪಾಟೀಲ ವಂದಿಸಿದರು ಶಿಕ್ಷಕಿಯರಾದ ಶ್ರೀಮತಿ ಸುನೀತಾ ಮಹಾವೀರ ಚೌಗಲೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Read All News