ಕೊಪ್ಪಳ : ಪರಿಶಿಷ್ಠ ಸಮುದಾಯದ ನಾಯಕರಿಗೆ ಮೊದಲ ಅಧ್ಯತೆ ನೀಡಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಛಲವಾದಿ ನಾರಾಯಣಸ್ವಾಮಿಯವರಿಗೆ ನೀಡಿ ಬಿಜೆಪಿ ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಗಣೇಶ್ ಹೊರತಟ್ನಾಳ ಹೇಳಿದರು .
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಪರಿಶಿಷ್ಟ ಸಮುದಾಯದ ನಾಯಕರಾದ ಛಲವಾದಿ ನಾರಾಯಣ್ ಸ್ವಾಮಿ ರವರನ್ನು ನೂತನವಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಕ್ಕೆ ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷದ ಮುಖಂಡರಿಂದ ಹರ್ಷ ವ್ಯಕ್ತ ಪಡಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ಪಕ್ಷದ ಸ್ಥಾನಮಾನಗಳನ್ನು ಮತ್ತು ಸರಕಾರ ನಡೆಸುವ ಸಂದರ್ಭಗಳಲ್ಲಿ ಪರಿಶಿಷ್ಠರ ಸಮುದಾಯದ ನಾಯಕರಿಗಳಿಗೆ ಪ್ರಮುಖ ಸ್ಥಾನಗಳನ್ನು ನೀಡುವಲ್ಲಿ ಪಕ್ಷ ಮತ್ತು ವರಿಷ್ಠರು ಪ್ರಾಮಾಣಿಕವಾಗಿ ನೀಡುತ್ತಾ ಬಂದಿದ್ದಾರೆ. ಬಿಜೆಪಿ ಪಕ್ಷ ಪರಿಶಿಷ್ಠರ ಪರವಾಗಿ ಇದೆ ಎಂದು ಸಾಭೀತುಪಡಿಸಲಾಗಿದೆ.
ಈ ಹಿಂದಿನಿಂದ ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿ ಪಕ್ಷ ಇದೊಂದು ಕೋಮುವಾದಿ ಪಕ್ಷ, ದಲಿತರ ವಿರೋಧ ಪಕ್ಷ, ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಅಪಪ್ರಚಾರ ಮಾಡಿಕೊಂಡು ಅಧಿಕಾರ ತೆಗೆದುಕೊಂಡು ರಾಜ್ಯದಲ್ಲಿ ಕಳೆದ 13 ತಿಂಗಳಿಂದ ನಿರಂತರವಾಗಿ ಭ್ರಷ್ಠಾಚಾರ ಮಾಡುವಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ನಿರತರಾಗಿದ್ದಾರೆ.
ಬಿಜೆಪಿ ಸರಕಾರದ ಅವಧಿಯಲ್ಲಿ ಪೌರಕಾರ್ಮಿಕರನ್ನು ಕಾಯಂ ನೇಮಕಾತಿ ನೀಡಿದರು, ಶಿಕ್ಷಣಕ್ಕೆ ಆದ್ಯತೆ ನೀಡಿದರು, ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಿದರು, ಅಸ್ಪೃಶ್ಯತೆ ಹೋಗಲಾಡಿಸಲು ವಿನಯ ಸಾಮರಸ್ಯ ಯೋಜನೆ ಜಾರಿಗೆ ತಂದರು, ವಿದ್ಯಾರ್ಥಿಗಳಿಗೆ ಸ್ಕಾಲರಶಿಪ್ ನೀಡಿದರು, ಅನೇಕ ಜನಪರ ಕಾರ್ಯಕ್ರಮಗಳನ್ನು ಕೊಡುವ ಮೂಲಕ ಆಡಳಿತ ನಡೆಸಿದರು.
ಆದ್ದರಿಂದ ಕೂಡಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಸಮುದಾಯಕ್ಕೆ ಮಿಸಲಿರಿಸಿದ ಅನುದಾನ ಸಮರ್ಪಕವಾಗಿ ಬಳಕೆ ಮಾಡಲು ಆದೇಶಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಅವರನ್ನು ಮನೆಗೆ ಕಳುಹಿಸುವ ಕೆಲಸವನ್ನು ರಾಜ್ಯದ ಜನರು ಮಾಡುತ್ತಾರೆ ಎಂದ ಅವರು ನೂತನವಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಛಲವಾದಿ ನಾರಾಯಣ್ ಸ್ವಾಮಿ ಅವರನ್ನು ಆಯ್ಕೆ ಮಾಡಿದ ಪಕ್ಷದ ವರಿಷ್ಟರಿಗೂ ಪಕ್ಷದ ಹಿರಿಯರಿಗೂ ಹೃದಯ ಪೂರ್ವಕ ಅಭಿನಂದನೆಗಳು.
ಸುದ್ದಿಗೋಷ್ಠಿಯಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಸಣ್ಣ ಕನಕಪ್ಪ ಛಲವಾದಿ , ಸುಂಕಪ್ಪ ಮಾಲಗಿತ್ತಿ , ಲಿಂಗರಾಜ ಕಟ್ಟಿಮನಿ, ಲಕ್ಷ್ಮಣ ಪೂಜಾರ ಉಪಸ್ಥಿತರಿದ್ದರು.
ವರದಿ : ರವಿಚಂದ್ರ ಬಿ ಬಡಿಗೇರ