ಬೈಲಹೊಂಗಲ- ಮೋಸದ ಹಾದಿ ಲೆಕ್ಕಕ್ಕೆ ಇಲ್ಲದೇನೆ ವಿಶ್ವಾಸದ ಹಾದಿ ತುಳಿಯಬೇಕಾಗಿರುವದು ಧರ್ಮ.
ಜೀವನದ ದಾರಿಯಲಿ ಕಷ್ಟ ಸುಖಗಳು ನೂರಾಎಂಟು, ಅವುಗಳ ಅನುಭವಿಸಿ ಸಾಗಿದರೆ ಜೀವನ ಸುಗಮವಾಗುವದು.
ಆಪತ್ಕಾಲದಲ್ಲಿ ನೆರವಿಗೆ ಬಾರದ ವ್ಯಕ್ತಿಗಳು ಮತ್ತು ವಿಶ್ವಾಸಕ್ಕೆ ಧಕ್ಕೆ ತರುವವರಿಗೆ ಸಮಯ ಸಾಧಕರು ಎನ್ನಬಹುದು.
ಸಮಯ ಸಾಧಕರ ಸಾಲಿನಲ್ಲಿ ನಿಲ್ಲುವ ವ್ಯಕ್ತಿಗಳು ತಮಗೆ ಹತ್ತಿರವಾಗಿರುವವರೇ ಇರುತ್ತಾರೆ. ಹೊರತು ಬೇರೆ ಯಾರಿಲ್ಲ. ಅವರಿಂದ ಮೋಸಕ್ಕೆ ಒಳಗಾಗಿ ಪಶ್ಚಾತ್ತಾಪ ಪಡಯವದಕ್ಕಿಂತ ಎಚ್ಚರಿಕೆಯ ಹೆಜ್ಜೆ ಇಡುವದು ಲೇಸು.
ಬೆಂಕಿಯ ಜೊತೆಗೆ ಸರಸ- ಗಾದಿಯ ಮಾತಿನಂತೆ ಎಲ್ಲಿಯ ಬೆಂಕಿ, ಎಲ್ಲಿಯ ಸರಸ ಒಂದಕ್ಕೊಂದು ಸಮಂಜಯವೇ ಅಲ್ಲಾ ಅಂತಹದರಲ್ಲಿ ವಿಶ್ವಾಸ ಮತ್ತು ಮೋಸಗಳು ಒಂದೆ ನಾಣ್ಯದ ಮುಖಗಳು ಎನ್ನುವ ರೀತಿಯಲ್ಲಿ ಸರಿಯಲ್ಲ.
ಎರಡು ಪದಗಳು, ಸನ್ನಿವೇಶಗಳು ಒಂದೇ ಆದರೂ ಕೂಡಾ ಅಚಲವಾದ ನಂಬಿಕೆಯ ಮುಂದೆ ಮೋಸಕ್ಕೆ ಲೆಕ್ಕವೇ ಇಲ್ಲ. ಕೊನೆಯದಾಗಿ ಉಳಿಯುವದೆ ನಂಬಿಕೆ. ತರ್ಕಕ್ಕೆ ನಿಲುಕದ ನಂಬಿಕೆ ದ್ರೋಹ ಮಾಡಿದರೂ ಕೂಡಾ ಉಳಿಯುವುದೊಂದೆ ಅದೇ ವಿಶ್ವಾಸ.
ವರದಿಗಾರ : ರವಿಕಿರಣ್ ಯಾತಗೇರಿ