ಶ್ರೀನಗರ:ಕಾಶ್ಮೀರದಲ್ಲಿ ಜಿ20 ಸಭೆ ನಡೆಸಲು ಚೀನಾ ವಿರೋಧ ವ್ಯಕ್ತಪಡಿಸಿದ್ದು, ಶ್ರೀನಗರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಟರ್ಕಿ ಮತ್ತು ಸೌದಿ ಅರೇಬಿಯಾ ನೋಂದಣಿ ಮಾಡಿಕೊಂಡಿಲ್ಲ.
ಮೇ 22-24 ರಿಂದ ನಡೆಯಲಿರುವ ಮೂರನೇ ಕಾರ್ಯಕಾರಿ ಗುಂಪಿನ ಸಭೆಗೆ ಒಟ್ಟು 60 ಅಂತರರಾಷ್ಟ್ರೀಯ ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಕೇಂದ್ರ ಪ್ರವಾಸೋದ್ಯಮ ಕಾರ್ಯದರ್ಶಿ ಅರವಿಂದ್ ಸಿಂಗ್ ಮೇ 19 ರಂದು ದೆಹಲಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಒಟ್ಟು 17 ಜಿ-20 ಸದಸ್ಯ ರಾಷ್ಟ್ರಗಳು ಇಲ್ಲಿಯವರೆಗೆ ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿವೆ. ಆಹ್ವಾನಿತ ದೇಶಗಳ ಸಂಖ್ಯೆ 9 ಅದರಲ್ಲಿ ಈಜಿಪ್ಟ್ ಮಾತ್ರ ಇದುವರೆಗೆ ನೋಂದಾಯಿಸಿಲ್ಲ ಎಂದು ಸಿಂಗ್ ಹೇಳಿದ್ದಾರೆ.