ಬೆಳಗಾವಿ: ಬೆಳಗಾವಿ ಜಿಲ್ಲಾ ಮೂರನೇ ಚುಟುಕು ಸಾಹಿತ್ಯ ಸಮ್ಮೇಳನ ರಾಮದುರ್ಗದ ಮರಾಠಾ ಮಂಗಲ ಕಾರ್ಯಾಲಯದಲ್ಲಿ ಅ.15 ಹಾಗೂ 16 ರಂದು ಆಯೋಜಿಸಲಾಗಿದೆ ಎಂದು ಚುಟು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಅಶೋಕ ಮಳಗಲಿ ತಿಳಿಸಿದರು.
ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರಾಮದುರ್ಗದ ಮಂಗಲ ಕಾರ್ಯಾಲಯದಲ್ಲಿ ಅ.16 ಹಾಗೂ 17 ರಂದು ಶ್ರೀ ಸಾಲಿ ರಾಮಚಂದ್ರರಾಯ ವೇದಿಯಲ್ಲಿ ಎರಡೂ ದಿನಗಳ ಕಾಲ ಚುಟುಕು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಎಲ್.ಎಸ್.ಶಾಸ್ತ್ರೀ ವಹಿಸಲಿದ್ದಾರೆ ಎಂದರು.
ಅಕ್ಟೋಬರ್ 15 ಶನಿವಾರದಂದು ಚುಟುಕು ಸಾಹಿತ್ಯ ಸಮ್ಮೇಳನದ ಧ್ವಜಾರೋಹಣವನ್ನು ರಾಮದುರ್ಗ ತಹಶಿಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ನೆರವೆರಿಸಲಿದ್ದಾರೆ. ನಾಡಧ್ವಜಾರೋಹಣವನ್ನು ಡಿವೈಎಸ್ಪಿ ಆರ್.ಎ.ಹಟ್ಟಿ ಮಾಡಲಿದ್ದಾರೆ. ಎಸ್.ಎಂ.ಸಕ್ರಿ, ಎ.ಎಸ್.ಲಾಲಸಂಗಿ, ಪ್ರವೀಣ್ ಕುಮಾರ ಸಾಲಿ, ಎಸ್.ವಾಯ್ ಕುಂದರಗಿ ಉಪಸ್ಥಿತಿತರಿರುತ್ತಾರೆ.
ಬೆಳಗ್ಗೆ 9.30ಕ್ಕೆ ರಾಮದುರ್ಗದ ಮಾಜಿ ಶಾಸಕ ಅಶೋಕ ಪಟ್ಟಣ ಭುವನೇಶ್ವರಿ ದೇವಿಯ ಮೆರವಣಿಗೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಮಲ್ಲಣ್ಣ ಯಾದವಾಡ, ರವಿ ಬಾಗಲಕೋಟ ಇರಲಿದ್ದಾರೆ ಎಂದರು.
ಬೆಳಗ್ಗೆ 10.45ಕ್ಕೆ ಪುಸ್ತಕ ಹಾಗೂ ಕಲಾ ಪ್ರದರ್ಶನದ ಉದ್ಘಾಟನೆಯನ್ನು ರಾಮದುರ್ಗದ ನ್ಯಾಯವಾದಿ ಪಿ.ಎಫ್. ಪಾಟೀಲ ನೆರವೆರಿಸಲಿದ್ದಾರೆ. ಟಿ.ಪಿ.ಮುನವಳ್ಳಿ ಹಾಗೂ ಆರ್.ಪಿ.ಅರಕೇರಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಬೆಳಗ್ಗೆ 11 ಗಂಟೆಗೆ ಚುಟುಕು ಸಾಹಿತ್ಯ ಸಮ್ಮೇಳದ ಉದ್ಘಾಟನೆಯನ್ನು ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ನೆರವೆರಿಸಲಿದ್ದಾರೆ. ಸರ್ವಾಧ್ಯಕ್ಷ ಎಲ್.ಎಸ್.ಶಾಸ್ತ್ರೀ, ನಿಕಟಪೂರ್ವ ಅಧ್ಯಕ್ಷ ಜಿನದತ್ತ ದೇಸಾಯಿ ಉಪಸ್ಥಿತರಿರುವವರು. ದಿವ್ಯ ಸಾನಿದ್ಯವನ್ನು ಚಿಕ್ಕೋಡಿಯ ಸಿದ್ಧ ಸಂಸ್ಥಾನ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ವಹಿಸಲಿದ್ದಾರೆ ಎಂದರು.
ಸ್ಮರಣ ಸಂಚಿಕೆ ಬಿಡುಗಡೆಯನ್ನು ಮೈಸೂರು ಚುಟುಕು ಸಾಹಿತ್ಯ ಪರಿಷತ್ತಿನ ಎಂ.ಜಿ.ಆರ್. ಅಸರ ಮಾಡಲಿದ್ದಾರೆ. ಪ್ರೊ.ವೆಂಕಟೇಶ ಹುಣಸಿಕಟ್ಟಿ, ಎಚ್.ಆರ್.ಮುದಿಗೌಡರ ಕೃತಿ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್.ಎಸ್.ಪಾಟೀಲ ವಹಿಸಲಿದ್ದಾರೆ. ಮಧ್ಯಾಹ್ನ 2 ರಿಂದ 3 ರವರೆಗೆ ನಾಡನುಡಿಯ ಅಭಿಯಾನ ಕುರಿತು ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯ ಹಿರಿಮೆ, ಗರಿಮೆ ಕುರಿತು ಡಾ.ಸಿ.ಕೆ.ಜೋರಾಪೂರ ಉಪನ್ಯಾಸ ನೀಡಲಿದ್ದಾರೆ. ರಾಮದುರ್ಗದ ಸಾಂಸ್ಕೃತಿಕ ವೈಭವದ ಕುರಿತು ಡಾ.ಸಿದ್ಧಪ್ಪ ಕಟ್ಟಿಕಾರ ಉಪನ್ಯಾಸ ನೀಡಲಿದ್ದಾರೆ ಎಂದರು.